ADVERTISEMENT

ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಭುವನೇಶ್ವರದಲ್ಲಿ ನಡೆಯುತ್ತಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ

ಪಿಟಿಐ
Published 13 ನವೆಂಬರ್ 2021, 12:37 IST
Last Updated 13 ನವೆಂಬರ್ 2021, 12:37 IST
ಪಿ.ಆರ್‌.ಶ್ರೀಜೇಶ್‌– ಎಎಫ್‌ಪಿ ಚಿತ್ರ್
ಪಿ.ಆರ್‌.ಶ್ರೀಜೇಶ್‌– ಎಎಫ್‌ಪಿ ಚಿತ್ರ್   

ನವದೆಹಲಿ: ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಅನುಭವಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಸೇರಿದಂತೆ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಪುರುಷರ ಹಾಕಿ ತಂಡದ ಆಟಗಾರರು, ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ಭಾನುವಾರ ಸೇರಿಕೊಳ್ಳಲಿದ್ದಾರೆ.

ಮುಂದಿನ ತಿಂಗಳು ಢಾಕಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೂರ್ವಸಿದ್ಧತೆಯಾಗಿ ರಾಷ್ಟ್ರೀಯ ಶಿಬಿರವು ಇದೇ 10ರಂದು ಆರಂಭವಾಗಿದೆ.

ಮನ್‌ಪ್ರೀತ್‌ ಹಾಗೂ ಶ್ರೀಜೇಶ್ ಅವರು ಈ ಸಾಲಿನ ಮೇಜರ್ ಧ್ಯಾನ್‌ಚಂದ್‌ ಖೇಲ್‌ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ADVERTISEMENT

ಹರ್ಮನ್‌ಪ್ರೀತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ನೀಲಕಂಠ ಶರ್ಮಾ, ಸುಮಿತ್, ಹಾರ್ದಿಕ್ ಸಿಂಗ್, ಸಿಮ್ರನ್‌ಜೀತ್‌ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಶಂಷೇರ್‌ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ವರುಣ್ ಕುಮಾರ್ ಭಾನುವಾರ ಶಿಬಿರಕ್ಕೆ ಸೇರಲಿರುವ ಇನ್ನುಳಿದ ಆಟಗಾರರು. ಒಲಿಂಪಿಕ್ಸ್‌ನ ಐತಿಹಾಸಿಕ ಸಾಧನೆಗಾಗಿ ಈ ಎಲ್ಲ ಆಟಗಾರರಿಗೆ ಅರ್ಜುನ ಪುರಸ್ಕಾರ ಒಲಿದಿದೆ.

ಅರ್ಜುನ ಪ್ರಶಸ್ತಿ ವಿಜೇತ ಇನ್ನೋರ್ವ ಆಟಗಾರ ವಿವೇಕ್ ಸಾಗರ್ ಪ್ರಸಾದ್‌ ಅವರು ಎಫ್‌ಐಎಚ್‌ ಜೂನಿಯರ್ ವಿಶ್ವಕಪ್ ಟೂರ್ನಿಯ ಬಳಿಕ ಸೀನಿಯರ್ ತಂಡದ ಶಿಬಿರ ಸೇರಿಕೊಳ್ಳಲಿದ್ದಾರೆ.

ಡಿಸೆಂಬರ್‌ ಒಂಬತ್ತರವರೆಗೆ ಶಿಬಿರ ನಡೆಯಲಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಡಿಸೆಂಬರ್‌ 14ರಿಂದ 22ರವರೆಗೆ ನಡೆಯಲಿದೆ. ಹಾಲಿ ಚಾಂಪಿಯನ್‌ ಭಾರತ, ಪಾಕಿಸ್ತಾನ, ಕೊರಿಯಾ, ಜಪಾನ್‌, ಮಲೇಷ್ಯಾ ಹಾಗೂ ಆತಿಥೇಯ ಬಾಂಗ್ಲಾದೇಶ ತಂಡಗಳು ‍ಪ್ರಶಸ್ತಿಗಾಗಿ ಸೆಣಸಲಿವೆ.

ತರಬೇತಿ ಶಿಬಿರದಲ್ಲಿರುವ ಆಟಗಾರರು: ಗೋಲ್ ಕೀಪರ್‌ಗಳು: ಪಿಆರ್ ಶ್ರೀಜೇಶ್, ಕ್ರಿಶನ್ ಬಿ ಪಾಠಕ್, ಸೂರಜ್ ಕರ್ಕೇರ.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ವರುಣ್ ಕುಮಾರ್, ಗುರಿಂದರ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ನೀಲಮ್ ಸಂಜೀಪ್ ಕ್ಸೆಸ್, ದೀಪ್‌ಸಾನ್‌ ಟಿರ್ಕಿ, ಮನ್‌ದೀಪ್ ಮೋರ್, ಆಶಿಶ್‌ ಕುಮಾರ್ ಟೋಪ್ನೊ, ಸುಮನ್ ಬೆಕ್.

ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ಸುಮಿತ್, ಹಾರ್ದಿಕ್ ಸಿಂಗ್, ಜಸ್ಕರನ್ ಸಿಂಗ್, ರಾಜ್ ಕುಮಾರ್ ಪಾಲ್.

ಫಾರ್ವರ್ಡ್ಸ್: ಸಿಮ್ರನ್‌ಜೀತ್‌ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಶಂಷೇರ್‌ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶದೀಪ್ ಸಿಂಗ್, ಗುರು ಸಾಹಿಬ್‌ಜೀತ್‌ ಸಿಂಗ್, ಶೀಲಾನಂದ್ ಲಾಕ್ರಾ, ದಿಲ್‌ಪ್ರೀತ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.