ನವದೆಹಲಿ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತ, ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸ್ವದೇಶದ ಕೋಚ್ ತರಬೇತಿಯಲ್ಲೇ 2024ರ ಪ್ಯಾರಿಸ್ ಕೂಟಕ್ಕೆ ಸಜ್ಜುಗೊಳ್ಳಲು ನಿರ್ಧರಿಸಿದ್ದಾರೆ.ಮಹತ್ವದ ಸಮಯವನ್ನು ಅನ್ಯ ದೇಶದಲ್ಲಿ ವಿದೇಶಿ ಕೋಚ್‌ಗಳ ಜೊತೆಗೆವ್ಯಯಿಸಲು ಅವರು ಬಯಸಿಲ್ಲ.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಕೂಡ ವಿದೇಶದಿಂದ ವೈಯಕ್ತಿಕ ತರಬೇತುದಾರರನ್ನು ನೇಮಿಸಿಕೊಳ್ಳುವ ಬದಲು ಭಾರತೀಯ ತರಬೇತುದಾರರ ಮಾರ್ಗದರ್ಶನ ಪಡೆಯಲು ಆದ್ಯತೆ ನೀಡುವುದಾಗಿ ಭಾರತ ಕುಸ್ತಿ ಫಡೆರೇಷನ್‌ಗೆ (ಡಬ್ಲ್ಯುಎಫ್‌ಐ) ತಿಳಿಸಿದ್ದಾರೆ.
ಭಾರತದ ಕೋಚ್‌ಗಳೊಂದಿಗೆ, ಛತ್ರಸಾಲ ಕ್ರೀಡಾಂಗಣದಲ್ಲಿ ಜಾರ್ಜಿಯಾದ ಶಾಕೊ ಬೆಂಟಿನಿಡಿಸ್ ಮತ್ತು ರಷ್ಯಾದ ಕಮಲ್ ಮಾಲಿಕೊವ್ ಅವರು ಕ್ರಮವಾಗಿ ಬಜರಂಗ್ ಮತ್ತು ರವಿ ಅವರಿಗೆ ತರಬೇತಿ ನೀಡಿದ್ದರು.
ಬೆಂಟಿನಿಡಿಸ್ ಜೊತೆಗಿನ ಒಪ್ಪಂದ ಕೊನೆಗೊಂಡಾಗಿನಿಂದಬಜರಂಗ್ ಅವರು ವಿದೇಶಿ ಕೋಚ್ ಅನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಹುಡುಕಾಟವು ಫಲ ನೀಡಿಲ್ಲ.
ರಷ್ಯಾದಲ್ಲಿ ಸದ್ಯ ನಡೆಯುತ್ತಿರುವ ತರಬೇತಿ ಶಿಬಿರದ ಸಮಯದಲ್ಲಿಯೂ ಅವರು ತರಬೇತುದಾರರನ್ನು ಹುಡುಕುತ್ತಿದ್ದರು. ಆದರೆ ಯಾರೂ ಭಾರತಕ್ಕೆ ಬರಲು ಸಿದ್ಧರಿಲ್ಲ ಎಂದು 27 ವರ್ಷ ವಯಸ್ಸಿನ ಪೈಲ್ವಾನ ಹೇಳಿದ್ದಾರೆ.
ಕೋವಿಡ್ ಮೂರನೇ ಅಲೆಯ ಬಿಕ್ಕಟ್ಟಿನ ಕಾರಣ ರಾಷ್ಟ್ರೀಯ ಶಿಬಿರಗಳಿಗೆ ವಿದೇಶಿ ತರಬೇತುದಾರರನ್ನು ನೇಮಿಸಿಕೊಳ್ಳುವುದುಡಬ್ಲ್ಯುಎಫ್‌ಐಗೂ ಕಷ್ಟದ ಕಾರ್ಯ ಎನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.