ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನ ಗೆದ್ದ ಚೀನಾ ಶುಭಾರಂಭ ಮಾಡಿಕೊಂಡಿದೆ.
ಶೂಟಿಂಗ್‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚೀನಾದ ಸ್ಪರ್ಧಿಗಳು ಸ್ವರ್ಣ ಸಾಧನೆ ಮಾಡಿದ್ದಾರೆ.
ಚೀನಾದ ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ 16-12ರ ಅಂತರದಲ್ಲಿ ಚೀನಾದ ಜೋಡಿ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ ಜಯ ಗಳಿಸಿದೆ.
ಈ ವಿಭಾಗದಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಕೆಯುಮ್ ಜಿ-ಹೈಯಾನ್ ಮತ್ತು ಪಾರ್ಕ್ ಹಾ-ಜುನ್ ಜೋಡಿ ಬೆಳ್ಳಿ ಮತ್ತು ಕಜಕಸ್ತಾನದ ಅಲೆಕ್ಸಾಂಡ್ರಾ ಲೆ ಮತ್ತು ಇಸ್ಲಾಂ ಸತ್ಪಯೇವ್ ಜೋಡಿ ಕಂಚಿನ ಪದಕ ಗೆದ್ದಿದೆ.
ಮೂರು ವರ್ಷಗಳ ಹಿಂದಿನ ಟೊಕಿಯೊ ಒಲಿಂಪಿಕ್ಸ್‌ನಲ್ಲೂ ಈ ವಿಭಾಗದಲ್ಲಿ ಚೀನಾ ದೇಶದ ಸ್ಪರ್ಧಿಗಳೇ ಚಿನ್ನದ ಪದಕ ಜಯಿಸಿದ್ದರು.
ಪ್ಯಾರಿಕ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರಕಿತ್ತು. ಶೂಟಿಂಗ್ ವಿಭಾಗದ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.