ಪ್ರಿಟೋರಿಯ: ಗೆಳತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಪ್ಯಾರಾ ಅಥ್ಲೀಟ್ ಆಸ್ಕರ್ ಪಿಸ್ಟೋರಿಯಸ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇಂದು ಅವರು ಜೈಲಿನಿಂದ ಬಿಡುಗಡೆಯಾದರು ಎಂದು ವರದಿಯಾಗಿದೆ. ಗೆಳತಿಯನ್ನು ಗುಂಡಿಕ್ಕಿ ಕೊಂದಿದ್ದರಿಂದ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು.
ಎರಡೂ ಕಾಲುಗಳನ್ನು ಕಳೆದು ಕೊಂಡಿದ್ದರೂ ಕೃತಕ ಕಾಲುಗಳ ನೆರವಿನಿಂದ ಟ್ರ್ಯಾಕ್‌ನಲ್ಲಿ ಮಿಂಚಿನ ಓಟದ ಮೂಲಕ ಅಚ್ಚರಿ ಮೂಡಿಸಿದ್ದರು.
ಗೆಳತಿಯನ್ನು ಕೊಂದ ಪ್ರಕರಣದಲ್ಲಿ 5ವರ್ಷ ಹಾಗೂ ಜೋಹಾನ್ಸ್‌ಬರ್ಗ್‌ನಲ್ಲಿ ರೆಸ್ಟೋರೆಂಟ್‌ನಲ್ಲಿ ತಮ್ಮ ಹ್ಯಾಂಡ್‌ಗನ್‌ನಿಂದ ಶೂಟ್ ಮಾಡಿದ ಪ್ರಕರಣದಲ್ಲಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಘಟನೆ ಏನು?:
29ರ ಹರೆಯದ ರೀವಾ ಸ್ಟೀನ್‌ಕಾಂಪ್ ಕೊಲೆ ಘಟನೆ 2013ರ ಫೆಬ್ರುವರಿ 14ರ ಮಧ್ಯರಾತ್ರಿ ನಡೆದಿತ್ತು. ಸ್ನಾನಗೃಹದಲ್ಲಿದ್ದ ಸ್ಟೀನ್‌ಕಾಂಪ್ ಅವರನ್ನು ಪಿಸ್ಟೋರಿಯಸ್ ಗುಂಡಿಕ್ಕಿ ಕೊಲೆ ಮಾಡಿದ್ದರು. ‘ಸ್ನಾನಗೃಹದಲ್ಲಿ ಇರುವುದು ಸ್ಟೀನ್‌ಕಾಂಪ್ ಎಂಬುದು ತಿಳಿದಿರಲಿಲ್ಲ. ಯಾರೋ ಅಪರಿಚಿತರು ಸ್ನಾನಗೃಹದ ಕಿಟಕಿಯ ಮೂಲಕ ಒಳಗೆ ನುಗ್ಗಿದ್ದಾರೆ ಎಂದು ಭಾವಿಸಿ ಗುಂಡಿಕ್ಕಿದ್ದೆ’ ಎಂದು ಪಿಸ್ಟೋರಿಯಸ್ ಹೇಳಿದ್ದರು. ಪಿಸ್ಟೋರಿಯಸ್ ‘ಉದ್ದೇಶಪೂರ್ವಕ ಕೊಲೆ’ ಆರೋಪದಿಂದ ಪಾರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.