ADVERTISEMENT

ಫಿಟ್ ಇಂಡಿಯಾ ಅಭಿಯಾನದಲ್ಲಿ 10 ಕೋಟಿ ಜನ: ರಿಜಿಜು

ಪಿಟಿಐ
Published 2 ಅಕ್ಟೋಬರ್ 2020, 18:30 IST
Last Updated 2 ಅಕ್ಟೋಬರ್ 2020, 18:30 IST
ನವದೆಹಲಿಯಲ್ಲಿ ಶುಕ್ರವಾರ ಫಿಟ್ ಇಂಡಿಯಾ ಪ್ಯಾರಾ ಸೈಕ್ಲಿಂಗ್ ತಂಡವನ್ನು ಸ್ವಾಗತಿಸಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿದರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ಶುಕ್ರವಾರ ಫಿಟ್ ಇಂಡಿಯಾ ಪ್ಯಾರಾ ಸೈಕ್ಲಿಂಗ್ ತಂಡವನ್ನು ಸ್ವಾಗತಿಸಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು ಆರಂಭಿಸಿರುವ ಫಿಟ್‌ ಇಂಡಿಯಾ ಅಭಿಯಾನದಲ್ಲಿ ಇಲ್ಲಿಯವರೆಗೆ ಹತ್ತು ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಶುಕ್ರವಾರ ದೆಹಲಿಗೆ ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ಆಗಮಿಸಿದ ಪ್ಯಾರಾ ಸೈಕ್ಲಿಂಗ್ ರ‍್ಯಾಲಿ ತಂಡವನ್ನು ಸ್ವಾಗತಿಸಿದ ಅವರು ಮಾತನಾಡಿದರು. ಈ ತಂಡವು 16 ದಿನಗಳವರೆಗೆ ಒಂದು ಸಾವಿರ ಕಿಲೋಮೀಟರ್ ಅಂತರವನ್ನು ಸೈಕ್ಲಿಂಗ್‌ ಮಾಡಿದ್ದನ್ನು ಅಭಿನಂದಿಸಿದರು.

‘ಫಿಟ್‌ ಇಂಡಿಯಾ ಕುರಿತು ಸಮೀಕ್ಷೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಯುವಜನರಲ್ಲಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸಲು ಅಭಿಯಾನ ಆರಂಭಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.