ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಚಿನ್ನದ ಪದಕ ವಿಜೇತ ಅಥ್ಲೀಟ್ ನೀರಜ್ ಚೋಪ್ರಾಗೆ ಮಂಗಳವಾರ ಡಬಲ್ ಸಂಭ್ರಮ.
ಸೇನೆಯಲ್ಲಿ ಸುಬೇದಾರ್ ಆಗಿರುವ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಒಲಿಯಿತು. ಜೊತೆಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಭಾರತೀಯ ಸೇನೆಯ 4 ರಜಪುತಾನಾ ರೈಫಲ್ಸ್‌ನಲ್ಲಿ ಚೋಪ್ರಾ ಸುಬೇದಾರ್ ಆಗಿದ್ದಾರೆ.
‘ಗಣರಾಜ್ಯೋತ್ಸವದ ಅಂಗವಾಗಿ ಸೇನೆಯಲ್ಲಿ ಗಮನಾರ್ಹ ಸೇವೆ ಮಾಡಿದವರಿಗೆ ವಿಶಿಷ್ಟ ಪುರಸ್ಕಾರ ನೀಡಲಾಗುತ್ತದೆ. ಪುಣೆಯ ಆರ್ಮಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮಿಷನ್ ಒಲಿಂಪಿಕ್ಸ್ ಘಟಕದಲ್ಲಿ ತರಬೇತಿ ಪಡೆಯಲು ಅವರು ಆಯ್ಕೆ ಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ.
ದೇವೆಂದ್ರಗೆ ಪದ್ಮಭೂಷಣ: 2016 ರಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೆಂದ್ರ ಝಜಾರಿಯಾ ಅವರಿಗೆ ಪದ್ಮಭೂಷಣದಿಂದ ಗೌರವಿಸಲಾಗಿದೆ.
ನೀರಜ್ ಚೋಪ್ರಾ, ಭಾರತ ಮಹಿಳಾ ಹಾಕಿ ತಂಡದ ವಂದನಾ ಕಟಾರಿಯಾ ಸೇರಿ ಎಂಟು ಕ್ರೀಡಾಪಟುಗಳಿಗೆ ಪದ್ಮಶ್ರೀ ಗೌರವ ನೀಡಲಾಗಿದೆ.
ಪಟ್ಟಿ
ಪದ್ಮಭೂಷಣ
ದೇವೆಂದ್ರ ಝಜಾರಿಯಾ (ರಾಜಸ್ಥಾನ)– ಪ್ಯಾರಾಲಿಂಪಿಕ್ಸ್- ಪದ್ಮಭೂಷಣ
ಪದ್ಮಶ್ರೀ
ನೀರಜ್ ಚೋಪ್ರಾ (ಹರಿಯಾಣ)
ವಂದನಾ ಕಟಾರಿಯಾ (ಉತ್ತರಾಖಂಡ)
ಸುಮಿತ್ ಅಂಟಿಲ್ (ಹರಿಯಾಣ)
ಪ್ರಮೋದ್ ಭಗತ್ (ಒಡಿಶಾ)
ಶಂಕರನಾರಾಯಣ ಮೆನನ್ ಚಾಂಡಿಲ್ (ಕೇರಳ)
ಫೈಸಲ್ ಅಲಿ ದಾರ್ (ಜಮ್ಮು–ಕಾಶ್ಮೀರ)
ಅವನಿ ಲೇಖರಾ (ರಾಜಸ್ಥಾನ)
ಬ್ರಹ್ಮಾನಂದ ಸಂಕವಾಳ್ಕರ್ (ಗೋವಾ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.