ದುಬೈ: ಭಾರತದ ಕೃಷ್ಣಾ ನಾಗರ್, ಫಾಜಾ–ದುಬೈ ಅಂತರರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಕಂಚಿನ ಸಾಧನೆ ಮಾಡಿದ್ದ ಕೃಷ್ಣಾ, ಪುರುಷರ ಎಸ್‌ಎಸ್–6 ವಿಭಾಗದ ಫೈನಲ್‌ನಲ್ಲಿ 20–22, 25–23, 21–12ರಲ್ಲಿ ಇಂಗ್ಲೆಂಡ್‌ನ ಕ್ರಿಸ್ಟನ್ ಕೂಂಬ್ಸ್‌ಗೆ ಆಘಾತ ನೀಡಿದರು. ಕ್ರಿಸ್ಟನ್ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಹೊಂದಿದ್ದರು.
ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಕೃಷ್ಣಾ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಜ್ಯಾಕ್ ಶೆಫರ್ಡ್ ಅವರನ್ನು ಸೋಲಿಸಿದ್ದರು.
ಮಿಶ್ರ ಡಬಲ್ಸ್‌ನಲ್ಲೂ ಕೃಷ್ಣಾ, ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರು ರಾಜಾ ಮಗೋತ್ರಾ ಜೊತೆಗೂಡಿ ಆಡಿದರು.
ಎಸ್‌ಎಲ್–3 ವಿಭಾಗದ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಪ್ರಮೋದ್ ಭಗತ್ ಮತ್ತು ಪಾರುಲ್ ಪಾರ್ಮರ್ ಚಿನ್ನದ ಪದಕ ಜಯಿಸಿದರು.
ಈ ಟೂರ್ನಿಯಲ್ಲಿ ಭಾರತ ಒಟ್ಟು ಒಂಬತ್ತು ಪದಕಗಳನ್ನು ಗೆದ್ದಿದೆ. ಇದರಲ್ಲಿ ನಾಲ್ಕು ಚಿನ್ನದ ಪದಕಗಳು ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.