ಶುಕ್ರವಾರ ರಾತ್ರಿ ಸೀನ್ ನದಿಯಲ್ಲಿ ನಡೆದ 33ನೇ ಒಲಿಂಪಿಕ್ ಕೂಟದ ಉದ್ಘಾಟನೆಯನ್ನು ವೀಕ್ಷಿಸಲು ಬರುವ ಮುನ್ನ ಸಾವಿರಾರು ಕ್ರೀಡಾಪ್ರೇಮಿ ಗಳನ್ನು ಹಲವು ‘ವಿಘ್ನ’ಗಳು ಕಾಡಿದವು. ಸಂಜೆ ಹೊತ್ತು ಸುರಿದ ಮಳೆ ಮತ್ತು ಮೈಲುಗಟ್ಟಲೇ ಉದ್ದದ ಸರದಿ ಸಾಲುಗಳಿಂದಾಗಿ ಕಾರ್ಯಕ್ರಮವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿತ್ತು. ಆದರೂ ಜನರ ಉತ್ಸಾಹಕ್ಕೆ ಒಂದಿನಿತೂ ಭಂಗ ಬರಲಿಲ್ಲ. ‘ಪ್ರೇಮದ ನಗರಿ’ಯಲ್ಲಿ ಕ್ರೀಡಾಪ್ರೀತಿ ಜಯಿಸಿತು. ಶತಮಾನದ ನಂತರ ಪ್ಯಾರಿಸ್‌ನಲ್ಲಿ ಆಯೋಜಿಸಲಾಗಿರುವ ಒಲಿಂಪಿಕ್ ಕೂಟ ಗರಿಗೆದರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.