ADVERTISEMENT

Paris Olympics | ಬಾಕ್ಸಿಂಗ್: ನಿಶಾಂತ್‌ ದೇವ್‌ಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 20:20 IST
Last Updated 3 ಆಗಸ್ಟ್ 2024, 20:20 IST
<div class="paragraphs"><p>ಭಾರತದ ನಿಶಾಂತ್ ದೇವ್ (ಬಲಕ್ಕೆ)</p></div>

ಭಾರತದ ನಿಶಾಂತ್ ದೇವ್ (ಬಲಕ್ಕೆ)

   

(ಪಿಟಿಐ ಚಿತ್ರ)

ಪ್ಯಾರಿಸ್: ಭಾರತದ ನಿಶಾಂತ್ ದೇವ್ ಶನಿವಾರ ನಡೆದ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿತು. 

ADVERTISEMENT

23 ವರ್ಷದ ನಿಶಾಂತ್ ಅವರು 1–4ರಿಂದ ಮೆಕ್ಸಿಕೊದ ಮಾರ್ಕೊ ವೆರ್ಡೆ ವಿರುದ್ಧ ಸೋತರು.  ಈ ಒಲಿಂಪಿಕ್ಸ್‌ನಲ್ಲಿ ಸೋತು ನಿರ್ಗಮಿಸಿದ ಐದನೇ ಬಾಕ್ಸರ್ ನಿಶಾಂತ್. 

ಮೆಕ್ಸಿಕೊದ ಬಾಕ್ಸರ್ ಅವರ ಪಂಚ್‌ಗಳು ನಿಖರವಾಗಿದ್ದವು. ಇದರಿಂದಾಗಿ ಆರಂಭದಿಂದಲೂ ಅವರು ಮೇಲುಗೈ ಸಾಧಿಸಿದರು. 

ನಿಶಾಂತ್ ಅವರು ಎಂಟರ ಘಟ್ಟದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರೆ ಭಾರತಕ್ಕೆ ಪದಕ ಲಭಿಸುತ್ತಿತ್ತು. ಇದೀಗ ಬಾಕ್ಸಿಂಗ್‌ ಅಂಕಣದಲ್ಲಿ ಮಹಿಳೆಯರ ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೈನ್ ಕ್ವಾರ್ಟರ್‌ಫೈನಲ್‌ ಆಡಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.