ADVERTISEMENT

ವಿನೇಶಾ ಫೋಗಟ್ ಅನರ್ಹ: ಸೆಮಿಫೈನಲ್ ಸೋತಿದ್ದ ಸ್ಪರ್ಧಿಗೆ ಫೈನಲ್ ಗೆಲ್ಲುವ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2024, 9:42 IST
Last Updated 7 ಆಗಸ್ಟ್ 2024, 9:42 IST
<div class="paragraphs"><p>ಕ್ಯೂಬಾದ&nbsp;ಯುಸೇನೆಯಲಿಸ್ ಗುಜ್ಮನ್ ಲೊಪೇಜ್‌ ಹಾಗೂ&nbsp;ಭಾರತದ ವಿನೇಶಾ ಫೋಗಟ್‌ (ಕೆಂಪು ಪೋಷಾಕು)</p></div>

ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್‌ ಹಾಗೂ ಭಾರತದ ವಿನೇಶಾ ಫೋಗಟ್‌ (ಕೆಂಪು ಪೋಷಾಕು)

   

ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ ವಿಭಾಗದ ಫೈನಲ್‌ನಿಂದ ಭಾರತದ ವಿನೇಶಾ ಫೋಗಟ್‌ ಅನರ್ಹರಾದ ಬೆನ್ನಲ್ಲೇ, ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್‌ಗೆ ಅದೃಷ್ಟ ಒಲಿದಿದೆ.

ADVERTISEMENT

ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಲೊಪೇಜ್‌ ಎದುರು 5–0 ಅಂತರದಿಂದ ಗೆದ್ದಿದ್ದ ಫೋಗಟ್‌, 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಅಂತಿಮ ಹಣಾಹಣಿಯಿಂದ ಅನರ್ಹರಾಗಿದ್ದಾರೆ.

ಹೀಗಾಗಿ, ಅಂತಿಮ ಹಣಾಹಣಿಯಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಮತ್ತು ಲೊಪೇಜ್ ಮುಖಾಮುಖಿಯಾಗಲಿದ್ದಾರೆ.

ಮಂಗಳವಾರ ಒಂದೇ ದಿನ ಮೂರು ಹಣಾಹಣಿಯಲ್ಲಿ ಸ್ಪರ್ಧಿಸಿದ್ದ ವಿನೇಶಾ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಮತ್ತು ಕಳೆದ ಬಾರಿಯ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ, ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರ ಸವಾಲನ್ನು ಮೀರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.