Olympics Hockey: ಬ್ರಿಟನ್ ಎದುರು ಗೆದ್ದ ಭಾರತ; ಪಂದ್ಯದ ರೋಚಕ ಕ್ಷಣಗಳನ್ನು ನೋಡಿ
ಪ್ರಜಾವಾಣಿ ವೆಬ್ ಡೆಸ್ಕ್ Published 4 ಆಗಸ್ಟ್ 2024, 12:28 IST Last Updated 4 ಆಗಸ್ಟ್ 2024, 12:28 IST ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಿತು.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಹಾಕಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ತಂಡ ಬ್ರಿಟನ್ ಪಡೆಯನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ನಿಗದಿತ ಅವಧಿಯಲ್ಲಿ 1–1 ಅಂತರದಿಂದ ಸಮಗೊಂಡಿದ್ದ ಪಂದ್ಯವನ್ನು ಭಾರತ, ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಗೆದ್ದಿದೆ. ರೆಡ್ ಕಾರ್ಡ್ ಪಡೆದು ಒಬ್ಬ ಆಟಗಾರ ಪಂದ್ಯದಿಂದ ಹೊರಬಿದ್ದರೂ, ಟೀಂ ಇಂಡಿಯಾ ಕೇವಲ 10 ಆಟಗಾರರೊಂದಿಗೆ ಹೋರಾಡಿ ಗೆಲುವು ಸಾಧಿಸಿದ್ದು ವಿಶೇಷ. ಈ ಪಂದ್ಯದ ರೋಚಕ ಕ್ಷಣಗಳನ್ನು ಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ.
ಪಂದ್ಯ ಆರಂಭಕ್ಕೂ ಮುನ್ನ ಭಾರತದ ಆಟಗಾರರು
ಪಂದ್ಯ ಆರಂಭಕ್ಕೂ ಮುನ್ನ ಬ್ರಿಟನ್ ಆಟಗಾರರು
ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಆಟಗಾರರ ಸೆಣಸಾಟ
ಬ್ರಿಟನ್‌ಗೆ ಗೋಲಿನ ಅವಕಾಶ ತಪ್ಪಿಸಿದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್
ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಎದುರಾಳಿ ಆಟಗಾರ ವಿಲಿಯಮ್ ಕಾಲ್ನನ್ ಅವರೊಂದಿಗೆ ಸೆಣಸಾಡಿದ ಅಮಿತ್ ರೋಹಿದಾಸ್. ಈ ವೇಳೆ ಕಾಲ್ನನ್ ಅವರ ಮುಖದ ಹತ್ತಿರಕ್ಕೆ ಹಾಕಿ ಸ್ಟಿಕ್ ಕೊಂಡೊಯ್ದ ಕಾರಣ ರೆಡ್ ಕಾರ್ಡ್ ಪಡೆದು, ಪಂದ್ಯದಿಂದ ಹೊರಗುಳಿಯುಂತಾಯಿತು.
ಮೊದಲ ಗೋಲು ಬಾರಿಸಿದ ಸಂಭ್ರಮದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್
ಗೋಲು ಪೆಟ್ಟಿಗೆ ಬಳಿ ರೋಚಕ ಸೆಣಸಾಟ
ಗೋಲು ಬಾರಿಸಿದ ಸಂಭ್ರಮದಲ್ಲಿ ಲೀ ಮಾರ್ಟನ್
ಗೋಲು ಪೆಟ್ಟಿಗೆ ಬಳಿ ತಡೆಗೋಡೆಯಂತೆ ಕಂಡ ಶ್ರೀಜೇಶ್
ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಿ ಸಂಭ್ರಮಿಸಿದ ಹರ್ಮನ್‌ಪ್ರೀತ್ ಸಿಂಗ್
ಪೆನಾಲ್ಟಿ ಶೂಟೌಟ್ ವೇಳೆ ಎದುರಾಳಿ ತಂಡದ ಗೋಲ್‌ಕೀಪರ್ ಅವರನ್ನು ವಂಚಿಸಿ ಗೆಲುವಿನ ಗೋಲು ಬಾರಿಸಿದ ರಾಜ್‌ಕುಮಾರ್ ಪಾಲ್
ಬ್ರಿಟನ್ ಪಡೆಯ ಗೋಲು ಯತ್ನಕ್ಕೆ ಅಡ್ಡಿಯಾದ ಶ್ರೀಜೇಶ್
ಜಯದ ಬಳಿಕ ಬಟ್ಟೆ ಬಿಚ್ಚಿ ಸಂಭ್ರಮಿಸಿದ ಮನ್‌ಪ್ರೀತ್ ಸಿಂಗ್
ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ
ಅಮೋಘ ಆಟವಾಡಿದ ಗೋಲ್‌ಕೀಪರ್ ಶ್ರೀಜೇಶ್ ಅವರನ್ನು ಅಪ್ಪಿ ಸಂಭ್ರಮಿಸಿದ 'ಭಾರತ'