ADVERTISEMENT

Paris Olympics | ಕುಸ್ತಿ ಅಖಾಡದಲ್ಲಿ ಭಾರತದ ಕನಸು: ಸ್ಪರ್ಧೆ ಇಂದಿನಿಂದ

ಕಣದಲ್ಲಿ ಭಾರತದ ಆರು ಪೈಲ್ವಾನರು: ಸ್ಪರ್ಧೆ ಇಂದಿನಿಂದ

ಪಿಟಿಐ
Published 5 ಆಗಸ್ಟ್ 2024, 0:17 IST
Last Updated 5 ಆಗಸ್ಟ್ 2024, 0:17 IST
<div class="paragraphs"><p>ಅಮನ್ ಸೆಹ್ರಾವತ್</p></div>

ಅಮನ್ ಸೆಹ್ರಾವತ್

   

ಪ್ಯಾರಿಸ್: ಒಲಿಂಪಿಕ್ ಕೂಟದಲ್ಲಿ ಸೋಮವಾರದಿಂದ ಕುಸ್ತಿ ಸ್ಪರ್ಧೆಗಳು ಆರಂಭವಾಗಲಿವೆ. ಭಾರತದ ಒಟ್ಟು ಆರು ಕುಸ್ತಿಪಟುಗಳು ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. 

ಪುರುಷರ ವಿಭಾಗದಲ್ಲಿ ಅಮನ್ ಸೆಹ್ರಾವತ್ ಅವರೊಬ್ಬರೇ ಭಾರತದ ಭರವಸೆಯಾಗಿದ್ದಾರೆ. ಉಳಿದ ಐವರು ಮಹಿಳೆಯರಾಗಿದ್ದಾರೆ.  ಈ ಆರೂ ಮಂದಿಯಲ್ಲಿ  ಐವರಿಗೆ ಇದು ಚೊಚ್ಚಲ ಒಲಿಂಪಿಕ್ಸ್‌ ಆಗಿದೆ. ವಿನೇಶಾ ಫೋಗಾಟ್ ಅವರಿಗೆ ಇದು ಮೂರನೇ ಒಲಿಂಪಿಕ್ ಕೂಟವಾಗಿದೆ.  ಅದರಿಂದಾಗಿ ಅವರ ಮೇಲೆ ಪದಕ ಜಯಿಸುವ ನಿರೀಕ್ಷೆ ಮೂಡಿಸಿದೆ.

ADVERTISEMENT

ಹೋದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ ಮುಷ್ಕರದಲ್ಲಿ ವಿನೇಶಾ ಮುಂಚೂಣಿಯಲ್ಲಿದ್ದರು. 

ಅಂತಿಮ ಪಂಘಾಲ್ ಅವರು ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಯುವ ಕುಸ್ತಿಪಟುವಾಗಿದ್ದಾರೆ. ಆದ್ದರಿಂದ ಅವರು ಕೂಡ ಪದಕ ಜಯದ ಭರವಸೆ ಮೂಡಿಸಿದ್ದಾರೆ. ತಂಡದಲ್ಲಿರುವ ಎಲ್ಲ ಕುಸ್ತಿಪಟುಗಳೂ ಹರಿಯಾಣದವರಾಗಿದ್ದಾರೆ. 

ವಿನೇಶಾ ಫೋಗಾಟ್ 

ವಯಸ್ಸು; 29

ವಿಭಾಗ: ಮಹಿಳೆಯರ 50 ಕೆ.ಜಿ

ಶೈಲಿ: ಫ್ರೀ ಸ್ಟೈಲ್

l2016 ಮತ್ತು 2020ರ ಒಲಿಂಪಿಕ್ ಕೂಟಗಳಲ್ಲಿ ಸ್ಪರ್ಧಿಸಿದ್ದರು. ಕ್ರಮವಾಗಿ 9 ಮತ್ತು 10ನೇ ಸ್ಥಾನ ಪಡೆದಿದ್ದರು

l2019 ಮತ್ತು 2022ರ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಕಂಚು

l2014 ಮತ್ತು 2018ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಕಂಚು ಮತ್ತು ಚಿನ್ನ

l2014, 2018, 2022ರ ಕಾಮನ್‌ವೆಲ್ತ್‌ ಗೇಮ್ಸ್‌ಗಳಲ್ಲಿ ಚಿನ್ನ

l2021ರ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನ

l2013ರ ಯೂತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ

ಅಮನ್ ಸೆಹ್ರಾವತ್ 

ವಯಸ್ಸು; 21

lವಿಭಾಗ: ಪುರುಷರ 57 ಕೆ.ಜಿ.  lಶೈಲಿ: ಫ್ರೀಸ್ಟೈಲ್

l2022ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು

l2023ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ

l2022, 2024ರಲ್ಲಿ ಗ್ರ್ಯಾನ್‌ ಪ್ರಿ ಕುಸ್ತಿಯ 57 ಕೆ.ಜಿ.ವಿಭಾಗಗಳಲ್ಲಿ ಚಿನ್ನ

l2022ರಲ್ಲಿ ಗ್ರ್ಯಾನ್‌ ಪ್ರಿ 61 ಕೆ.ಜಿ. ವಿಭಾಗದಲ್ಲಿ ಬೆಳ್ಳಿ

l2023 ಹಾಗೂ 2024ರಲ್ಲಿ 57 ಕೆ.ಜಿ. ವಿಭಾಗದಲ್ಲಿ ಕ್ರಮವಾಗಿ ಕಂಚು, ಬೆಳ್ಳಿ

l2022ರಲ್ಲಿ ಏಷ್ಯನ್ 23 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನ

l2022ರ ವಿಶ್ವ 23 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ

l2018, 2019ರಲ್ಲಿ ವಿಶ್ವ ಕೆಡೆಟ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ.

lಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಪುರುಷರ ತಂಡದಲ್ಲಿ ಆಯ್ಕೆಯಾಗಿರುವ ಏಕೈಕ ಕುಸ್ತಿಪಟು. 

ರೀತಿಕಾ  ಹೂಡಾ 

ವಯಸ್ಸು; 22

ವಿಭಾಗ: ಮಹಿಳೆಯರ 76 ಕೆ.ಜಿ

ಶೈಲಿ: ಫ್ರೀ ಸ್ಟೈಲ್

l2023ರ ಏಷ್ಯನ್ ಚಾಂಪಿಯನ್‌ಷಿಪ್‌ ಕಂಚು

l2023ರ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ ಚಿನ್ನ

l ಅವರು ಪ್ರಸ್ತುತ ಭಾರತ ನೌಕಾಪಡೆಯಲ್ಲಿ ಅಧಿಕಾರಿ ಯಾಗಿದ್ದಾರೆ.

ಅಂಶು ಮಲಿಕ್ 

ವಯಸ್ಸು; 22

ವಿಭಾಗ: ಮಹಿಳೆಯರ 57 ಕೆ.ಜಿ

ಶೈಲಿ: ಫ್ರೀ ಸ್ಟೈಲ್

l2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ

l2022ರ ಕಾಮನ್‌ವೆಲ್ತ್ ಗೇಮ್ಸ್‌ ಬೆಳ್ಳಿ 

l2020ರ ಇಂಡಿವಿಜುವಲ್ ವಿಶ್ವಕಪ್ ಬೆಳ್ಳಿ

l2019 ವಿಶ್ವ ಜೂನಿಯರ್ ಕುಸ್ತಿ ಚಿನ್ನ 

lಏಷ್ಯನ್ ಚಾಂಪಿಯನ್‌ಷಿಪ್– 2020 ಕಂಚು, 2021 ಚಿನ್ನ, 2022 ಬೆಳ್ಳಿ ಹಾಗೂ 2023 ಕಂಚು

ಅಂತಿಮ ಪಂಘಲ್  

ವಯಸ್ಸು; 19

lವಿಭಾಗ: ಮಹಿಳೆಯರ 53 ಕೆ.ಜಿ lಶೈಲಿ: ಫ್ರೀ ಸ್ಟೈಲ್

l2023ರ ವಿಶ್ವ ಚಾಂಪಿಯನ್‌ಷಿಪ್ ಕಂಚು

l2022ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚು

l2023ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ

l2022ರ ಗ್ರ್ಯಾನ್‌ಪ್ರಿಯಲ್ಲಿ ಚಿನ್ನ, 2024ರಲ್ಲಿ ಬೆಳ್ಳಿ

l2022 ಮತ್ತು 2023ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ

l2024 ಮೊದಲ ಬಾರಿಗೆ ಒಲಿಂಪಿಕ್‌ ಕೂಟಕ್ಕೆ ಅರ್ಹತೆ

ನಿಶಾ ದಹಿಯಾ

ವಯಸ್ಸು; 25

ವಿಭಾಗ: ಮಹಿಳೆಯರ 68 ಕೆ.ಜಿ

ಶೈಲಿ: ಫ್ರೀ ಸ್ಟೈಲ್

l 2021ರ ವಿಶ್ವ 23 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಕಂಚು

l2023ರ ಏಷ್ಯನ್ ಚಾಂಪಿಯನ್‌ಷಿಪ್ ನಲ್ಲಿ ಬೆಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.