ಪ್ಯಾರಿಸ್: ಭಾರತದ ಪ್ರವೀಣ್ ಜಾಧವ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಪುರುಷರ ರಿಕರ್ವ್ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ನೇರ ಸೆಟ್‌ಗಳಲ್ಲಿ ಕಾವೊ ವೆನ್ ಚಾವೊ ವಿರುದ್ಧ ಸೋಲನುಭವಿಸಿದರು.
64ರ ಸುತ್ತಿನಲ್ಲಿ ಜಾಧವ್ 0-6ರಿಂದ (28-29, 29-30, 27-28) ಚಾವೊ ಅವರಿಗೆ ಮಣಿದರು.
ಜಾಧವ್ ಅವರು ಪಂದ್ಯದಲ್ಲಿ ನಾಲ್ಕು ಬಾರಿ 10 ಅಂಕ ಗಳಿಸಿದರು. ಆದಾಗ್ಯೂ ಚೀನಾದ ಕಾವೊ ವೆನ್ ಚಾವೊ ಪ್ರತಿ ಬಾರಿ ಜಾಧವ್‌ಗಿಂತ ಒಂದು ಹೆಚ್ಚಿನ ಅಂಕ ಗಳಿಸುವಲ್ಲಿ ಸಫಲರಾದರು.
ಜಾಧವ್ ಸೋಲಿನೊಂದಿಗೆ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಈ ವಾರದ ಆರಂಭದಲ್ಲಿ ಅನುಭವಿ ತರುಣ್‌ದೀಪ್ ರಾಯ್ ಮತ್ತು ಧೀರಜ್ ಬೊಮ್ಮದೇವರ ಅವರು ನಾಕೌಟ್ ಹಂತದಲ್ಲೇ ಸೋಲನುಭವಿಸಿದ್ದಾರೆ.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಭಜನ್ ಕೌರ್ ಅವರು ಇನ್ನೂ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಶನಿವಾರ ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಆಡಲಿದ್ದಾರೆ.
ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.