ADVERTISEMENT

ಪ್ಯಾರಿಸ್ ಒಲಿಂಪಿಕ್: ದಾಖಲೆಯ 97 ಲಕ್ಷ ಟಿಕೆಟ್ ಮಾರಾಟ

ಏಜೆನ್ಸೀಸ್
Published 25 ಜುಲೈ 2024, 16:23 IST
Last Updated 25 ಜುಲೈ 2024, 16:23 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್</p></div>

ಪ್ಯಾರಿಸ್ ಒಲಿಂಪಿಕ್

   

ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ಒಲಿಂಪಿಕ್‌ ಇತಿಹಾಸದಲ್ಲೇ ದಾಖಲೆ ಸಂಖ್ಯೆಯ ಟಿಕೆಟ್‌ಗಳನ್ನು ಈ ಬಾರಿ ಮಾರಾಟ ಅಥವಾ ವಿತರಣೆ ಮಾಡಲಾಗಿದೆ ಎಂದು ಪ್ಯಾರಿಸ್‌ ಒಲಿಂಪಿಕ್‌ ಸಂಘಟಕರು ತಿಳಿಸಿದ್ದಾರೆ.

ADVERTISEMENT

ಈ ವರ್ಷದ ಒಲಿಂಪಿಕ್‌ ಹಾಗೂ ಪ್ಯಾರಾಲಿಂಪಿಕ್‌ ಕ್ರೀಡಾಕೂಟಗಳಿಗೆ ಇದುವರೆಗೆ 97 ಲಕ್ಷ ಟಿಕೆಟ್‌ಗಳನ್ನು ಮಾರಾಟ ಅಥವಾ ಹಂಚಿಕೆ ಮಾಡಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಅವರು ಹೇಳಿದ್ದಾರೆ.

ಪ್ಯಾರಿಸ್‌ ಕ್ರೀಡಾಕೂಟಕ್ಕಾಗಿ ಒಟ್ಟು 1 ಕೋಟಿ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಪಾರ ಜನಪ್ರಿಯತೆಯ ಹೊರತಾಗಿಯೂ ಇನ್ನಷ್ಟು ಟಿಕೆಟ್‌ಗಳು ಉಳಿದಿವೆ ಎನ್ನಲಾಗಿದೆ.

1996ರಲ್ಲಿ ಅಟ್ಲಾಂಟಾದಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದ ವೇಳೆ 83 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಅದು ಈವರೆಗೆ ದಾಖಲೆಯಾಗಿತ್ತು.

ಟೆಕೆಟ್‌ ದರ ದುಬಾರಿಯಾಗಿದ್ದು, ಅವುಗಳನ್ನು ಖರೀದಿಸುವುದು ಸಾಮಾನ್ಯ ಜನರಿಗೆ ಕಷ್ಟವಾಗಲಿದೆ ಎಂಬ ಟೀಕೆಗಳು ಆರಂಭದಲ್ಲಿ ಕೇಳಿ ಬಂದಿದ್ದವು. ಹೀಗಾಗಿ, ಕ್ರೀಡಾಕೂಟಕ್ಕೆ ಹೆಚ್ಚಿನ ಜನರನ್ನು ಸೆಳೆಯುವ ಸಲುವಾಗಿ ಸ್ಥಳೀಯ ಯುವಕರು, ಯುವ ಕ್ರೀಡಾಪಟುಗಳು, ವಿಕಲಚೇತನರು ಹಾಗೂ ಇತರರಿಗೆ ಸುಮಾರು 10 ಲಕ್ಷದಷ್ಟು ಉಚಿತ ಟಿಕೆಟ್‌ಗಳನ್ನು ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.