ADVERTISEMENT

ಒಲಿಂಪಿಕ್ಸ್‌ ಹಾಕಿ: ಭಾರತಕ್ಕೆ ಮೊದಲ ಎದುರಾಳಿ ನ್ಯೂಜಿಲೆಂಡ್‌

ಪಿಟಿಐ
Published 6 ಮಾರ್ಚ್ 2024, 15:14 IST
Last Updated 6 ಮಾರ್ಚ್ 2024, 15:14 IST
   

ಲುಸಾನ್: ಭಾರತ ಪುರುಷರ ಹಾಕಿ ತಂಡ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ಬುಧವಾರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಈ ಸಲ ‘ಬಿ’ ಗುಂಪಿನಲ್ಲಿದೆ. ಭಾರತ ಜುಲೈ 29ರಂದು ಅರ್ಜೆಂಟೀನಾ ತಂಡವನ್ನು, 30ರಂದು ಐರ್ಲೆಂಡ್‌ ವಿರುದ್ಧ, ಆಗಸ್ಟ್ 1ರಂದು ಬೆಲ್ಜಿಯಂ ವಿರುದ್ಧ, 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್‌, ಸ್ಪೇನ್‌, ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ.

ADVERTISEMENT

ಕ್ವಾರ್ಟರ್‌ಫೈನಲ್ ಪಂದ್ಯಗಳು ಆ. 4ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆ. 6 ರಂದು ನಡೆಯಲಿವೆ. ಕಂಚಿನ ಪದಕ ಪಡೆಯುವ ತಂಡ ನಿರ್ಧರಿಸಲು ಪಂದ್ಯ ಮತ್ತು ಫೈನಲ್ ಆ 8ರಂದು ನಡೆಯಲಿವೆ.

ಕೊಲಂಬಸ್‌ನ ಇವ್ಸ್ ಡ್ಯು ಮ್ಯಾನುವಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ ಬೆಲ್ಜಿಯಂ ತಂಡ ಹಾಲಿ ಒಲಿಂಪಿಕ್ ಚಾಂಪಿಯನ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.