ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕರ್ನಾಟಕದ ಈಜುಪಟುಗಳಾದ ಶ್ರೀಹರಿ, ಧಿನಿಧಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 19:44 IST
Last Updated 26 ಜೂನ್ 2024, 19:44 IST
ಶ್ರೀಹರಿ ನಟರಾಜ್ 
ಶ್ರೀಹರಿ ನಟರಾಜ್    

ಬೆಂಗಳೂರು: ನಗರದ ಈಜುಪಟುಗಳಾದ ಧಿನಿಧಿ ದೇಸಿಂಗು ಮತ್ತು ಶ್ರೀಹರಿ ನಟರಾಜ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ.

ಯುನಿವರ್ಸಲಿಟಿ ಪ್ಲೇಸಸ್‌ ಕ್ವಾಲಿಫಿಕೇಷನ್ ಸಿಸ್ಟಮ್‌ನಲ್ಲಿ ಅವರು ಸ್ಥಾನ ಪಡೆದಿದ್ದಾರೆ ಎಂದು ಬುಧವಾರ ಫಿನಾ (ಅಂತರರಾಷ್ಟ್ರೀಯ ಈಜು ಫೆಡರೇಷನ್) ಪ್ರಕಟಿಸಿದೆ. 

14 ವರ್ಷದ ಧಿನಿಧಿ ಅವರು ಮಹಿಳೆಯರ ವಿಭಾಗದಲ್ಲಿ ಆಯ್ಕೆಯಾದ ಕಿರಿಯ ಈಜುಪಟುವಾಗಿದ್ದಾರೆ. 

ADVERTISEMENT

ಅಗ್ರ ರ‍್ಯಾಂಕ್‌ ಗಳಿಸಿರುವ ದೇಶದ ಇಬ್ಬರು ಈಜುಪಟುಗಳನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡುವ ಅವಕಾಶ  ರಾಷ್ಟ್ರೀಯ ಈಜು ಫೆಡರೇಷನ್ ಗೆ ಇರುತ್ತದೆ. ಭಾರತ ಈಜು ಫೆಡರೇಷನ್ (ಎಸ್‌ಎಫ್‌ಐ) ಮಹಿಳೆಯರ ವಿಭಾಗದಲ್ಲಿ ಧಿನಿಧಿ (749 ಅಂಕ) ಮತ್ತು ಪುರುಷರ ವಿಭಾಗದಲ್ಲಿ ಶ್ರೀಹರಿ (849 ಅಂಕ) ಅವರ ಹೆಸರುಗಳನ್ನು ಆಯ್ಕೆ ಮಾಡಿದೆ. 

‘ನನಗೆ ಅಪಾರ ಸಂತಸವಾಗಿದೆ. ನನ್ನ ಜೀವಮಾನದ ಅನುಭವ ಇದಾಗಲಿದೆ’ ಎಂದು ಧಿನಿಧಿ ಹೇಳಿದ್ದಾರೆ. 

ಅವರು ಮಹಿಳೆಯರ 200 ಮೀ ಫ್ರೀಸ್ಟೈಲ್‌ (ವೈಯಕ್ತಿಕ ಶ್ರೇಷ್ಠ: 2ನಿ,04.24ಸೆ)

ಶ್ರೀಹರಿ ನಟರಾಜ್ ಅವರು 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿದ್ದರು. ಆದರೆ ಆಗ ಅವರು ಒಲಿಂಪಿಕ್ ಕ್ವಾಲಿಫಿಕೇಷನ್ ಟೈಮಿಂಗ್‌ (ಒಕ್ಯೂಟಿ)ಯಲ್ಲಿ ಅರ್ಹತೆ ಗಳಿಸಿದ್ದರು. ಆದರೆ ಈ ಬಾರಿ ಅವರು ವಿಫಲರಾಗಿ, ಯುನಿವರ್ಸಲಿಟಿಯಲ್ಲಿ ಆಯ್ಕೆಯಾಗಿದ್ದಾರೆ.

ಶ್ರೀಹರಿ 100 ಮೀ ಬ್ಯಾಕ್‌ಸ್ಟ್ರೋಕ್ (ವೈಯಕ್ತಿಕ ಶ್ರೇಷ್ಠ ಸಮಯ: 53.77ಸೆಕೆಂಡು) ವಿಭಾಗದಲ್ಲಿ ಸ್ಪರ್ಧಿಸುವರು. 

‘ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭರವಸೆ ಇತ್ತು. ಅದು ಈಡೇರಲಿರುವುದು ಸಂತಸ ತಂದಿದೆ‘ ಎಂದು 23 ವರ್ಷದ ಶ್ರೀಹರಿ ಹೇಳಿದರು.

ಧಿನಿಧಿ ದೇಸಿಂಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.