ADVERTISEMENT

Paris | 5000 ಮೀ. ಓಟ: ಫೈನಲ್‌ಗೆ ಅರ್ಹತೆ ಪಡೆಯಲು ಪಾರುಲ್‌, ಅಂಕಿತಾ ವಿಫಲ

ಪಿಟಿಐ
Published 3 ಆಗಸ್ಟ್ 2024, 0:21 IST
Last Updated 3 ಆಗಸ್ಟ್ 2024, 0:21 IST
<div class="paragraphs"><p>ಪಾರುಲ್‌ ಚೌಧರಿ</p></div>

ಪಾರುಲ್‌ ಚೌಧರಿ

   

(ಪಿಟಿಐ ಚಿತ್ರ)

ಪ್ಯಾರಿಸ್‌: ಭಾರತದ ಪಾರುಲ್‌ ಚೌಧರಿ ಮತ್ತು ಅಂಕಿತಾ ಧ್ಯಾನಿ ಅವರು ಒಲಿಂಪಿಕ್ಸ್‌ನ 5000 ಮೀಟರ್‌ ಓಟದಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾದರು.

ADVERTISEMENT

ರಾಷ್ಟ್ರೀಯ ದಾಖಲೆ ಹೊಂದಿರುವ 29 ವರ್ಷ ವಯಸ್ಸಿನ ಪಾರುಲ್‌ ಅವರು ಶುಕ್ರವಾರ ನಡೆದ ಸ್ಪರ್ಧೆಯಲ್ಲಿ (ಹೀಟ್‌ 2) 15 ನಿ.10.68 ಸೆಕೆಂಡ್‌ನಲ್ಲಿ ಗುರಿ ತಲುಪಿ 14ನೇ ಸ್ಥಾನ ಪಡೆದರು. ಒಟ್ಟಾರೆಯಾಗಿ 24ನೇ ಸ್ಥಾನ ಗಳಿಸಿದರು.

22 ವರ್ಷ ವಯಸ್ಸಿನ ಅಂಕಿತಾ ಹೀಟ್‌ 1ರಲ್ಲಿ 20ನೇ ಸ್ಥಾನ ಪಡೆದರೆ, ಒಟ್ಟಾರೆಯಾಗಿ ಕೊನೆಯ 40ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹಾಲಿ ಒಲಿಂಪಿಕ್ 1500 ಮೀ ಚಾಂಪಿಯನ್ ಕೆನ್ಯಾದ ಫೇಯ್ತ್ ಕಿಪಿಗೊನ್ ಅರ್ಹತಾ ಸುತ್ತಿನಲ್ಲಿ 14 ನಿ.57.56 ಸೆಕೆಂಡ್‌ನಲ್ಲಿ ಅಗ್ರಸ್ಥಾನ ಪಡೆದರು. ಟೋಕಿಯೊ ಗೇಮ್ಸ್ ಚಿನ್ನದ ಪದಕ ವಿಜೇತ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ (14 ನಿ.57.65ಸೆ) ನಂತರದ ಸ್ಥಾನದಲ್ಲಿದ್ದಾರೆ.

ಪ್ರಸ್ತುತ 5000 ಮೀ ವಿಶ್ವ ದಾಖಲೆ ಹೊಂದಿರುವ ಇಥಿಯೋಪಿಯಾದ ಗುಡಾಫ್ ತ್ಸೆಗೆ (14 ನಿ.57.84ಸೆ) ಒಟ್ಟಾರೆ ಐದನೇ ಸ್ಥಾನ ಪಡೆದರು.  ಎರಡು ಹೀಟ್ಸ್‌ನಲ್ಲಿ ಅಗ್ರ ಎಂಟು ಸ್ಥಾನ ಪಡೆದ 16 ಮಂದಿ ಫೈನಲ್‌ಗೆ ಅರ್ಹತೆ ಪಡೆದರು. 

ಚೌಧರಿ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 3000ಮೀ ಸ್ಟೀಪಲ್‌ಚೇಸ್‌ ಸ್ಪರ್ಧೆಯಲ್ಲಿ ಕಣಕ್ಕೆ ಇಳಿಯಲಿದ್ದು, ಭಾನುವಾರ ಹೀಟ್‌ ರೇಸ್‌ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.