ADVERTISEMENT

Paris Olympics | ಶೂಟಿಂಗ್: ಆರಂಭದಲ್ಲೇ ತಪ್ಪಿದ ಭಾರತದ ಗುರಿ

ಪಿಟಿಐ
Published 27 ಜುಲೈ 2024, 10:41 IST
Last Updated 27 ಜುಲೈ 2024, 10:41 IST
<div class="paragraphs"><p>ಸರಬ್ಜೋತ್ ಸಿಂಗ್</p></div>

ಸರಬ್ಜೋತ್ ಸಿಂಗ್

   

(ಪಿಟಿಐ ಚಿತ್ರ)

ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದ ಮೊದಲ ದಿನವೇ ಭಾರತದ ಶೂಟರ್‌ಗಳು ನಿರಾಸೆ ಅನುಭವಿಸಿದ್ದಾರೆ.

ADVERTISEMENT

ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ಅರ್ಜನ್ ಸಿಂಗ್ ಚೀಮಾ, ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಸರಬ್ಜೋತ್ 577 ಅಂಕಗಳೊಂದಿಗೆ ಒಂಬತ್ತನೇ ಮತ್ತು ಅರ್ಜುನ್ 574 ಅಂಕಗಳೊಂದಿಗೆ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಆ ಮೂಲಕ ಸರಬ್ಜೋತ್ ಅಂತಿಮ ಸುತ್ತಿಗೆ ಪ್ರವೇಶಿಸುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾದರು. ಈ ವಿಭಾಗದಲ್ಲಿ ಅಗ್ರ ಎಂಟು ಸ್ದರ್ಧಿಗಳು ಫೈನಲ್‌ಗೆ ಅರ್ಹತೆ ಪಡೆದುಕೊಂಡರು.

10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದ ಅರ್ಹತಾ ಸುತ್ತಿನಲ್ಲೂ ಭಾರತದ ಸ್ಪರ್ಧಿಗಳು ಕಳಪೆ ಪ್ರದರ್ಶನ ನೀಡಿದ್ದಾರೆ. ರಮಿತಾ ಜಿಂದಾಲ್ ಹಾಗೂ ಅರ್ಜನ್ ಬಾಬುತಾ 628.7 ಅಂಕಗಳೊಂದಿಗೆ ಒಟ್ಟಾರೆಯಾಗಿ ಆರನೇ ಸ್ಥಾನ ಗಳಿಸಿದರು. ಎಲವೆನಿಲ್ ವಲರಿವನ್ ಹಾಗೂ ಸಂದೀಪ್ ಸಿಂಗ್ ಜೋಡಿ 626.3 ಅಂಕ ಗಳಿಸಿ 12ನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.