ಪ್ಯಾರಿಸ್: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶಾಟ್‍ಪುಟ್ ಪಟು ರವಿ ರೊಂಗಾಲಿಗೆ ಸ್ವಲ್ಪದರಲ್ಲೇ ಪದಕ ಕೈ ತಪ್ಪಿದೆ.
ಪುರುಷರ ಎಫ್40 ಶಾಟ್‌ಪುಟ್ ವಿಭಾಗದ ಫೈನಲ್‌ನಲ್ಲಿ ರವಿ, ಐದನೇ ಸ್ಥಾನ ಪಡೆದರು.
ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ರೊಂಗಾಲಿ ಬೆಳ್ಳಿ ಪದಕ ಗೆದ್ದಿದ್ದರು.
10.63 ಮೀ. ದೂರ ಶಾಟ್‌ಪುಟ್ ಎಸೆಯುವ ಮೂಲಕ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರೂ ರವಿ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.
ಈ ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಪೋರ್ಚುಗಲ್‌ನ ಮಿಗುಯೆಲ್ ಮೊಂಟೆರೊ (11.21 ಮೀ.) ಚಿನ್ನದ ಪದಕ, ಮಂಗೋಲಿಯಾದ ಬಟ್ಟುಲ್ಗಾ ತ್ಸೆಗ್ಮಿಡ್ (11.09 ಮೀ.) ಬೆಳ್ಳಿ ಪದಕ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ ಚಾಂಪಿಯನ್ ಇರಾಕ್‌ನ ಗರ್ರಾ ತ್ನಾಯಾಶ್ (11.03 ಮೀ.) ಕಂಚಿನ ಪದಕ ಗೆದ್ದರು.
ಈ ಹಿಂದೆ ಪ್ಯಾರಾ ಬ್ಯಾಡ್ಮಿಂಟನ್ ಹಾಗೂ ಪ್ಯಾರಾ ಜಾವೆಲಿನ್ ಎಸೆತದಲ್ಲೂ ರವಿ ರೊಂಗಾಲಿ ಛಾಪು ಮೂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.