ADVERTISEMENT

Paris Paralympics | ಎಸ್‌ಎಚ್1 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ ಶೂಟರ್ ಅವನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2024, 10:51 IST
Last Updated 3 ಸೆಪ್ಟೆಂಬರ್ 2024, 10:51 IST
<div class="paragraphs"><p>ಅವನಿ ಲೇಖರಾ</p></div>

ಅವನಿ ಲೇಖರಾ

   

(ಪಿಟಿಐ ಸಂಗ್ರಹ ಚಿತ್ರ)

ಪ್ಯಾರಿಸ್: ಫ್ರಾನ್‌ನಲ್ಲಿ ನಡೆಯುತ್ತಿರುವ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ಪಟು ಅವನಿ ಲೇಖರಾ, ಫೈನಲ್‌ಗೆ ಪ್ರವೇಶಿಸಿದ್ದಾರೆ.

ADVERTISEMENT

ಮಹಿಳೆಯರ 50 ಮೀ. ರೈಫಲ್ 3 ಪೊಶಿಷನ್ ಎಸ್‌ಎಚ್1 ವಿಭಾಗದ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಗಳಿಸಿರುವ ಅವನಿ, ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಮತ್ತೊಂದೆಡೆ ಭಾರತದವರೇ ಆದ ಮೋನಾ ಅಗರ್ವಾಲ್, 13ನೇ ಸ್ಥಾನ ಪಡೆದು ನಿರ್ಗಮಿಸಿದ್ದಾರೆ.

ಅಗ್ರ ಎಂಟು ಸ್ಥಾನ ಪಡೆದ ಶೂಟರ್‌ಗಳು ಫೈನಲ್‌ಗೆ ಲಗ್ಗೆ ಇಟ್ಟರು. ಅವನಿ ಒಟ್ಟು 1,159 ಅಂಕಗಳನ್ನು ಕಲೆ ಹಾಕಿದರು.

22 ವರ್ಷದ ಅವನಿ ಮಹಿಳೆಯರ 10 ಮೀ. ಏರ್ ರೈಫಲ್ (ಎಸ್‌ಎಚ್1) ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು. ಇದೇ ವಿಭಾಗದಲ್ಲಿ ಮೋನಾ ಕಂಚಿನ ಪದಕ ಗೆದ್ದಿದ್ದರು.

ಅವನಿ ಲೇಖರಾ, ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದರು.

ಮಿಶ್ರ ಡಬಲ್ಸ್ 10 ಮೀ. ಏರ್ ರೈಫಲ್ ಪ್ರೋನ್ (ಎಸ್‌ಎಚ್1) ವಿಭಾಗದಲ್ಲಿ ಸಿದ್ದಾರ್ಥ ಬಾಬು ಅವರೊಂದಿಗೆ ಸ್ಪರ್ಧಿಸಿದ್ದ ಅವನಿ, ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.