ADVERTISEMENT

Paris Olympics ಉದ್ಘಾಟನಾ ಸಮಾರಂಭ ಮಳೆಯಲ್ಲಿ ಕೊಚ್ಚಿ ಹೋಗಲಿದೆ: ಹವಾಮಾನ ವರದಿ

ಪಿಟಿಐ
Published 26 ಜುಲೈ 2024, 13:16 IST
Last Updated 26 ಜುಲೈ 2024, 13:16 IST
<div class="paragraphs"><p>ಉದ್ಘಾಟನಾ ಕಾರ್ಯಕ್ರಮಕ್ಕೆ ತಯಾರಿ</p></div>

ಉದ್ಘಾಟನಾ ಕಾರ್ಯಕ್ರಮಕ್ಕೆ ತಯಾರಿ

   

ರಾಯಿಟರ್ಸ್ ಚಿತ್ರ

ಪ್ಯಾರಿಸ್: ಪ್ಯಾರಿಸ್‌ನ ಹೃದಯ ಭಾಗದಲ್ಲಿ ಇಂದು ಬಹುನಿರೀಕ್ಷಿತ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಲು ವೇದಿಕೆ ಸಜ್ಜಾಗಿದ್ದು, ಈ ಸಂಭ್ರಮದ ಕ್ಷಣಕ್ಕೆ ಮಳೆ ಅಡ್ಡಿಯಾಗಲಿದೆ ಎನ್ನುತ್ತಿವೆ ಹವಾಮಾನ ವರದಿಗಳು.

ADVERTISEMENT

ಸೆನ್ ನದಿಯ ತಟದಲ್ಲಿ ನಡೆಯಲಿರುವ ಅಭೂತಪೂರ್ವ ಉದ್ಘಾಟನಾ ಸಮಾರಂಭಕ್ಕೆ ಸುಮಾರು 3 ಲಕ್ಷ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಅಥ್ಲೀಟ್‌ಗಳು ಪ್ಯಾರಿಸ್‌ನ ಹೃದಯ ಭಾಗದ ಸೆನ್ ನದಿಯಲ್ಲಿ ದೋಣಿಗಳ ಫ್ಲೋಟಿಲ್ಲಾದ ಮೇಲೆ ಪರೇಡ್ ನಡೆಸುವ ಮೂಲಕ ಅತಿರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿಶ್ವದಾದ್ಯಂತ ಇದನ್ನು ಶತಕೋಟಿ ಮಂದಿ ವೀಕ್ಷಿಸುವ ನಿರೀಕ್ಷೆ ಇದೆ.

ಆದರೆ, ಕಾರ್ಯಕ್ರಮ ನಡೆಯಲಿರುವ ಪ್ಯಾರಿಸ್‌ನಲ್ಲಿ 25 ಮಿ.ಮೀನಿಂದ (0.98 ಇಂಚು) ನಿಂದ 30 ಮಿ.ಮೀ (1.18 ಇಂಚು) ಮಳೆ ಬೀಳುವ ಮುನ್ಸೂಚನೆ ಇದೆ.

ರಾತ್ರಿ 3 ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಜಗತ್ತಿನ ಖ್ಯಾತ ನಾಯಕರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.

‘ಕೆಲ ಗಂಟೆಗಳ ಈ ಕಾರ್ಯಕ್ರಮವು ಮಳೆಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ’ ಎಂದು ಸ್ವತಂತ್ರ ಹವಾಮಾನ ಕೇಂದ್ರ ಅಗಾಟೆ ಮಿಟಿಯೊ ಮುಖ್ಯಸ್ಥ ಪ್ಯಾಟ್ರಿಕ್ ಮರ್ಲೀರೆ ಅವರು ಬಿಡುಗಡೆ ಮಾಡಿರುವ ಪ್ರಕಟಣೆ ಆರ್‌ಎಂಸಿ ರೇಡಿಯೊದಲ್ಲಿ ಪ್ರಸಾರವಾಗಿದೆ.

‘ನಾನು ಹವಾಮಾನದ ಹಲವು ಮಾದರಿಗಳ ವಿಶ್ಲೇಷಣೆ ನಡೆಸುತ್ತಿದ್ದೇನೆ. ಆದರೆ, ಉದ್ಘಾಟನಾ ಸಮಾರಂಭದ ಆರಂಭದಿಂದ ಅಂತ್ಯದವರೆಗೆ ಮಳೆ ಬೀಳುವ ಫಲಿತಾಂಶವೇ ಸಿಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪ್ಯಾರಿಸ್‌ನ ಸರ್ಕಾರಿ ಹವಾಮಾನ ಸಂಸ್ಥೆ ಮೀಟಿಯೊ ಫ್ರಾನ್ಸ್ ಸಹ ಶುಕ್ರವಾರ ಸಂಜೆ ಮಳೆ ಬೀಳುವ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.