ನವದೆಹಲಿ: ಕೋವಿಡ್–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಭಾರತ ಪ್ಯಾರಾಲಿಂಪಿಕ್ ಸಮಿತಿಯು (ಪಿಸಿಐ) 500 ಪಿಪಿಇ (ವೈಯಕ್ತಿಕ ಸುರಕ್ಷಾ ಸಾಧನ) ಕಿಟ್‌ಗಳನ್ನು ದೆಹಲಿ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ.
‘ದೆಹಲಿ ಸರ್ಕಾರಕ್ಕೆ ಶನಿವಾರ 500 ಕಿಟ್‌ಗಳನ್ನು ನೀಡಿದ್ದು, ಸೋಮವಾರ ಕೇಂದ್ರ ಸರ್ಕಾರಕ್ಕೆ 1000 ಕಿಟ್‌ಗಳನ್ನು ಕೊಡಲಿದ್ದೇವೆ’ ಎಂದು ಪಿಸಿಐನ ಪ್ರಧಾನ ಕಾರ್ಯದರ್ಶಿ ಗುರುಶರಣ್ ಸಿಂಗ್ ಹೇಳಿದ್ದಾರೆ.
ಈ ಕಿಟ್‌ಗಳು ಬೆಂಗಳೂರಿನಲ್ಲಿ ತಯಾರಾಗಿವೆ. ಹೋದ ತಿಂಗಳು ಪಿಸಿಐ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.