ADVERTISEMENT

Paris Olympics | ನಾಲ್ಕನೇ ಚಿನ್ನ ಗೆದ್ದ ಲಿಯೋ ಮಾರಷಾ

ಈಜುಕೊಳದಲ್ಲಿ ಸಂಚಲನ ಮೂಡಿಸಿದ ಫ್ರಾನ್ಸ್‌ ದೇಶದ ನವತಾರೆ

ಏಜೆನ್ಸೀಸ್
Published 4 ಆಗಸ್ಟ್ 2024, 0:00 IST
Last Updated 4 ಆಗಸ್ಟ್ 2024, 0:00 IST
ಫ್ರಾನ್ಸ್‌ ದೇಶದ ಲಿಯೊ ಮಾರಷಾ ಅವರು ಪುರುಷರ 200 ಮೀ ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗ್ಗಿದರು  –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್ 
ಫ್ರಾನ್ಸ್‌ ದೇಶದ ಲಿಯೊ ಮಾರಷಾ ಅವರು ಪುರುಷರ 200 ಮೀ ವೈಯಕ್ತಿಕ ಮೆಡ್ಲೆ ಈಜು ಸ್ಪರ್ಧೆಯಲ್ಲಿ ಗುರಿಯತ್ತ ಮುನ್ನುಗ್ಗಿದರು  –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್     

ಪ್ಯಾರಿಸ್: ಆತಿಥೇಯ ಫ್ರಾನ್ಸ್ ದೇಶದ ಲಿಯೋ ಮಾರಷಾ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಈಜು ಸ್ಪರ್ಧೆಯ 200 ಮೀ ವೈಯಕ್ತಿಕ ಮೆಡ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದರೊಂದಿಗೆ ಕಳೆದೊಂದು ವಾರದಲ್ಲಿ ನಾಲ್ಕನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 

ಅಮೆರಿಕದ ದಿಗ್ಗಜ ಈಜುಪಟು ಮೈಕೆಲ್ ಪೆಲ್ಪ್ಸ್  2008ರಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿದ್ದರು. ಅ ದಾಖಲೆಯನ್ನು ಲಿಯೋ ಸರಿಗಟ್ಟಿದರು. ಶುಕ್ರವಾರ ತಡರಾತ್ರಿ (ಭಾರತೀಯ ಕಾಲಮಾನ) ನಡೆದ 200 ಮೀ ವೈಯಕ್ತಿಕ ಮೆಡ್ಲೆಯಲ್ಲಿ ಅವರು 1ನಿಮಿಷ, 54.06ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇತಿಹಾಸದಲ್ಲಿ ಇದುವರೆಗೆ ಈ ಸ್ಪರ್ಧೆಯಲ್ಲಿ ಹೆಚ್ಚು ವೇಗದಲ್ಲಿ ಗುರಿ ಮುಟ್ಟಿದ ದಾಖಲೆಪಟ್ಟಿಯಲ್ಲಿ ಅವರು ಎರಡನೇ ಸ್ಥಾನ ಪಡೆದರು. 

ಇದೇ ವಿಭಾಗದಲ್ಲಿ ಬ್ರಿಟನ್‌ನ ಡಂಕನ್ ಸ್ಕಾಟ್ ಬೆಳ್ಳಿ ಮತ್ತು ಚೀನಾ ವಾಂಗ್ ಶನ್ ಕಂಚಿನ ಪದಕ ಗಳಿಸಿದರು. 

ADVERTISEMENT

ಲಾ ಡಿಫೆನ್ಸಾ ಅರೆನಾದಲ್ಲಿ ಆತಿಥೇಯ ದೇಶದ ಅಭಿಮಾನಿಗಳಿಗೆ ಸಂಭ್ರಮದ ಹೊನಲು ಹರಿಯಿತು. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರೂ ಈ ಸಂದರ್ಭದಲ್ಲಿ ಜನರೊಂದಿಗೆ ಇದ್ದು ಸಂಭ್ರಮಿಸಿದರು. 

‘ಈ ವಾರ ಎಲ್ಲವೂ ಕರಾರುವಾಕ್ ಆಗಿದೆ. ಯಾವುದೇ ಲೋಪವೂ ಆಗಿಲ್ಲ’ ಎಂದು 22 ವರ್ಷದ ಲಿಯೋ ಸಂತಸ ವ್ಯಕ್ತಪಡಿಸಿರು. 

ಅವರು ಈಗಾಗಲೇ 200 ಮೀ ಬಟರ್‌ಫ್ಲೈ, 200 ಮೀ ಬ್ರೆಸ್ಟ್‌ಸ್ಟ್ರೋಕ್ ಮತ್ತು 400 ಮೀ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. 

‘ಇದು ಆರಂಭವಷ್ಟೇ. ನನ್ನ ಮುಂದಿನ ಗುರಿ ಲಾಸ್‌ ಏಂಜಲೀಸ್. ನಾನು ನಿಜಕ್ಕೂ ಉತ್ಸುಕನಾಗಿರುವೆ’ ಎಂದು ಮುಂದಿನ ಸಲದ (2028) ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ಪಡಿಸಿದ್ದಾರೆ. 

ಪ್ಯಾರಿಸ್‌ ಕೂಟದಲ್ಲಿ ಅವರು ಎರಡು ರಿಲೆ ಸ್ಪರ್ಧೆಗಳಲ್ಲಿ ತಮ್ಮ ದೇಶದ ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.