ಹೈದರಾಬಾದ್: ತೀವ್ರ ಕುತೂಹಲ ಕೆರಳಿಸಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳ ನಡುವಣ ಪಂದ್ಯವು ಟೈ ಆಯಿತು.
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯವು 30–30ರಿಂದ ಸಮಬಲಗೊಂಡಿತು.
ಅರ್ಜುನ್ ದೇಶ್ವಾಲ್ (7 ಅಂಕ) ಮತ್ತು ವಿಕಾಶ್ ಕಂಡೋಲಾ (6 ಅಂಕ )ಅವರ
ಆಟದ ಬಲದಿಂದ ಜೈಪುರ ಪಂದ್ಯ ಮುಕ್ತಾಯಕ್ಕೆ ಎರಡೂವರೆ ನಿಮಿಷಗಳು ಬಾಕಿ ಇರುವಾಗ 29-26ರಲ್ಲಿಮುನ್ನಡೆಯಲ್ಲಿತ್ತು. ಆದರೆ ಎದುರಾಳಿ ತಂಡದ ಸಚಿನ್ (11 ಅಂಕ) ಅವರ ಚುರುಕಾದ ಆಟದಿಂದಾಗಿ ತಲೈವಾಸ್ ಸೋಲಿನಿಂದ ಪಾರಾಯಿತು.
ಶನಿವಾರ ಬೆಂಗಾಲ್ ಮತ್ತು ಮುಂಬಾ ನಡುವಿನ ಪಂದ್ಯ ಕೂಡ ಟೈ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.