ADVERTISEMENT

ವೈರಲ್‌ ವಿಡಿಯೊ: ಹಾಕಿ ಗೆದ್ದ ಭಾರತ ತಂಡದ ಆಟಗಾರರಿಗೆ ಕರೆ ಮಾಡಿ ಮಾತಾಡಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 8:32 IST
Last Updated 5 ಆಗಸ್ಟ್ 2021, 8:32 IST
ಭಾರತ ಹಾಕಿ ತಂಡದ ಕೋಚ್‌ ಮತ್ತು ಆಟಗಾರರು ಮೋದಿ ಅವರೊಂದಿಗೆ ಫೋನ್‌ ಮೂಲಕ ಮಾತನಾಡುತ್ತಿರುವುದು. (ಸಚಿವ ಅನುರಾಗ್‌ ಠಾಕೂರ್‌ ಹಂಚಿಕೊಂಡ ವಿಡಿಯೊದ ಚಿತ್ರ)
ಭಾರತ ಹಾಕಿ ತಂಡದ ಕೋಚ್‌ ಮತ್ತು ಆಟಗಾರರು ಮೋದಿ ಅವರೊಂದಿಗೆ ಫೋನ್‌ ಮೂಲಕ ಮಾತನಾಡುತ್ತಿರುವುದು. (ಸಚಿವ ಅನುರಾಗ್‌ ಠಾಕೂರ್‌ ಹಂಚಿಕೊಂಡ ವಿಡಿಯೊದ ಚಿತ್ರ)    

ದೆಹಲಿ: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಜಯ ದಾಖಲಿಸಿದ ಸಂಭ್ರಮದಲ್ಲಿದ್ದ ಭಾರತದ ಪುರಷರ ಹಾಕಿ ತಂಡದ ಆಟಗಾರರು ಮತ್ತು ಕೋಚ್‌ಗೆ ಅಚ್ಚರಿಯ ಕರೆಯೊಂದು ಬಂದಿದೆ.

ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಒಲಿಂಪಿಕ್ಸ್ ಪುರುಷ ಹಾಕಿ ವಿಭಾಗದಲ್ಲಿ ಭಾರತ ಪದಕ ಗೆದ್ದ ಸಾಧನೆ ಮಾಡಿದೆ. ಇದು ರಾಷ್ಟ್ರೀಯ ಕ್ರೀಡೆ ಹಾಕಿ ಪಾಲಿಗೆ ಐತಿಹಾಸಿಕ ಕ್ಷಣ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮೂರನೇ ಸ್ಥಾನಕ್ಕಾಗಿ ಹೋರಾಟದಲ್ಲಿ ಭಾರತ ತಂಡವು ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿ ಕಂಚಿನ ಪದಕ ಜಯಿಸಿತು.

ಅತ್ತ ಭಾರತ ಜಯ ದಾಖಲಿಸುತ್ತಲೇ ಇತ್ತ ಟ್ವೀಟ್‌ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಯೊಬ್ಬ ಭಾರತೀಯನ ನೆನಪಿನಲ್ಲಿ ಉಳಿಯುವಂತಹ ಐತಿಹಾಸಿಕ ದಿನ. ಕಂಚು ಗೆದ್ದ ಹಾಕಿ ತಂಡಕ್ಕೆ ಅಭಿನಂದನೆಗಳು. ಈ ಸಾಧನೆಯೊಂದಿಗೆ ಆಟಗಾರರು ಇಡೀ ರಾಷ್ಟ್ರದ, ವಿಶೇಷವಾಗಿ ನಮ್ಮ ಯುವಕರ ಹೃದಯ ಗೆದ್ದಿದ್ದಾರೆ. ಹಾಕಿ ತಂಡದ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಟ್ವೀಟ್‌ ಮಾಡಿದ್ದರು.

ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಹಾಕಿ ತಂಡಕ್ಕೆ ಕರೆ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ತಂಡದ ಆಟಗಾರರೊಂದಿಗೆ ಖುದ್ದು ಮಾತನಾಡುತ್ತಾ ಪ್ರಶಂಸಿಸಿದ್ದಾರೆ. ಕೋಚ್‌ ಅನ್ನು ಅಭಿನಂದಿಸಿದ್ದಾರೆ.

ಹಾಕಿ ತಂಡಕ್ಕೆ ಪ್ರಧಾನಿ ಕರೆ ಮಾಡಿ ಮಾತನಾಡಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರೂ ವಿಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.