ADVERTISEMENT

ವಿಶ್ವ ಅಥ್ಲೆಟಿಕ್ಸ್‌ ಹೈಂಜಪ್‌: ಫೈನಲ್‌ಗೆ ಪೂಜಾ ಸಿಂಗ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 15:23 IST
Last Updated 30 ಆಗಸ್ಟ್ 2024, 15:23 IST
<div class="paragraphs"><p>ಪೂಜಾ ಸಿಂಗ್‌</p></div>

ಪೂಜಾ ಸಿಂಗ್‌

   

(ಚಿತ್ರ ಕೃಪೆ– X/@Media_SAI)

ಲಿಮಾ, ಪೆರು: ಭಾರತದ ಪೂಜಾ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌  ಹೈಜಂಪ್‌ ಅರ್ಹತಾ ಸುತ್ತಿನಲ್ಲಿ ಒಂಬತ್ತನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು. ಈ ಮೂಲಕ ಮತ್ತೊಮ್ಮೆ ಮಹಿಳೆಯರ ರಾಷ್ಟ್ರೀಯ ದಾಖಲೆಯನ್ನು ಬರೆದರು.

ADVERTISEMENT

ಹರಿಯಾಣದ ಫತೇಬಾದ್ ಜಿಲ್ಲೆಯವರಾದ 17 ವರ್ಷ ವಯಸ್ಸಿನ ಅವರು, ಗುರುವಾರ ತಡರಾತ್ರಿ ನಡೆದ ‘ಬಿ’ ಗುಂಪಿನ ಅರ್ಹತಾ ಸುತ್ತಿನಲ್ಲಿ 1.83 ಮೀ ಎತ್ತರ ಜಿಗಿದು ಎರಡನೇ ಸ್ಥಾನ ಮತ್ತು ಒಟ್ಟಾರೆ ಒಂಬತ್ತನೇ ಸ್ಥಾನ ಪಡೆದು ಶನಿವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆದರು.

ಗಾರೆ ಕೆಲಸಗಾರನ ಮಗಳಾಗಿರುವ ಪೂಜಾ, ಕಳೆದ ವರ್ಷ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ 1.82 ಮೀ ಜಿಗಿಯುವ ಮೂಲಕ ಬೆಳ್ಳಿ ಪದಕ ಪಡೆದಿದ್ದರು. ಈಗ ತಮ್ಮ ಸ್ವಂತ ದಾಖಲೆಯನ್ನು ಮುರಿದಿದ್ದಾರೆ.

‘ಎ’ ಗುಂಪಿನಲ್ಲಿ ಒಂಬತ್ತು ಮತ್ತು ‘ಬಿ’ ಗುಂಪಿನಲ್ಲಿ ಮೂವರು ಅಥ್ಲೀಟ್‌ಗಳು ಫೈನಲ್‌ಗೆ ಪ್ರವೇಶಿಸಿದರು.

ಸರಿಯಾದ ಸಲಕರಣೆಗಳಿಲ್ಲದೆ ಕೋಚ್ ಬಲ್ವಾನ್ ಸಿಂಗ್ ಅವರ ನೇತೃತ್ವದಲ್ಲಿ ಪಾರ್ಟಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಪೂಜಾ, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 1.41 ಮೀ ಜಿಗಿಯುವ ಮೂಲಕ ಚಿನ್ನ ಗೆದ್ದಿದ್ದರು. ಈ ವೇೆಳೆ ಆದ ಗಾಯದಿಂದಾಗಿ 15 ತಿಂಗಳು ಅವರು ಸ್ಪರ್ಧೆಯಿಂದ ದೂರವಿದ್ದರು.

ನಂತರ ಪೂಜಾ 2022ರ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. 2022ರ ಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಚಿನ್ನವನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.