ADVERTISEMENT

ಅಂಚೆ ನೌಕರರ ಬ್ಯಾಡ್ಮಿಂಟನ್‌ ಟೂರ್ನಿ: ಕರ್ನಾಟಕ ತಂಡಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 22:05 IST
Last Updated 10 ನವೆಂಬರ್ 2024, 22:05 IST
<div class="paragraphs"><p>ಬ್ಯಾಡ್ಮಿಂಟನ್‌ (ಪ್ರಾತಿನಿಧಿಕ ಚಿತ್ರ)</p></div>

ಬ್ಯಾಡ್ಮಿಂಟನ್‌ (ಪ್ರಾತಿನಿಧಿಕ ಚಿತ್ರ)

   

ಮೈಸೂರು: ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡಗಳು ಭಾನುವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಆರಂಭಗೊಂಡ ಅಂಚೆ ನೌಕರರ 38ನೇ ಅಖಿಲ ಭಾರತ ಬ್ಯಾಡ್ಮಿಂಟನ್‌ ಟೂರ್ನಿಯ ಟೀಮ್‌ ಚಾಂಪಿಯನ್‌ಷಿಪ್‌ ವಿಭಾಗದ ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ನಿರಾಸೆ ಅನುಭವಿಸಿದವು.

ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕವು 1–3ರಿಂದ ಜಾರ್ಖಂಡ್ ಎದುರು ಮಣಿಯಿತು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ವನಿತೆಯರು 1–2ರಿಂದ ಗುಜರಾತ್‌ ಎದುರು ಪರಾಭವಗೊಂಡರು. ವಿವಿಧ ರಾಜ್ಯಗಳ 20 ಪುರುಷರ ಹಾಗೂ 17 ಮಹಿಳೆಯರ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ.

ADVERTISEMENT

ಮೊದಲ ದಿನದ ಫಲಿತಾಂಶ: (ಪ್ರಿ ಕ್ವಾರ್ಟರ್ ಫೈನಲ್‌): ಟೀಂ ಚಾಂಪಿಯನ್‌ಷಿಪ್: ಪುರುಷರು: ಜಾರ್ಖಂಡ್ 3–0ರಿಂದ ಕಾಶ್ಮೀರ ವಿರುದ್ಧ; ಹರಿಯಾಣ 3–1ರಿಂದ ಪಶ್ಚಿಮ ಬಂಗಾಳ ವಿರುದ್ಧ; ಕೇರಳ 3–1ರಿಂದ ರಾಜಸ್ಥಾನ ಎದುರು; ಮಹಾರಾಷ್ಟ್ರ 3–0ರಿಂದ ಉತ್ತರಾಖಂಡ ವಿರುದ್ಧ; ಒಡಿಶಾ 3–2ರಿಂದ ಅಸ್ಸಾಂ ಎದುರು; ತೆಲಂಗಾಣ 3–0ರಿಂದ ಪಂಜಾಬ್ ವಿರುದ್ಧ; ತಮಿಳುನಾಡು 3–1ರಿಂದ ಹಿಮಾಚಲ ಪ್ರದೇಶ ವಿರುದ್ಧ; ಹರಿಯಾಣ 3–0ರಿಂದ ಛತ್ತೀಸ್‌ಗಢ ಎದುರು; ಗುಜರಾತ್ 3–1ರಿಂದ ದೆಹಲಿ ವಿರುದ್ಧ ಗೆಲುವು.

ಮಹಿಳೆಯರ ವಿಭಾಗ: ಗುಜರಾತ್ 2–0ರಿಂದ ಪಂಜಾಬ್ ವಿರುದ್ಧ; ಒಡಿಶಾ 2–0ರಿಂದ ಜಮ್ಮು ಕಾಶ್ಮೀರ ಎದುರು; ಹರಿಯಾಣ 2–0 ರಿಂದ ಛತ್ತೀಸ್‌ಗಢ ವಿರುದ್ಧ; ಪಶ್ಚಿಮ ಬಂಗಾಳ 2–0ರಿಂದ ಹಿಮಾಚಲ ಪ್ರದೇಶ ವಿರುದ್ಧ; ಅಸ್ಸಾಂ 2–1ರಿಂದ ದೆಹಲಿ ಎದುರು; ತಮಿಳುನಾಡು 2–0ರಿಂದ ತೆಲಂಗಾಣ ವಿರುದ್ಧ; ಮಹಾರಾಷ್ಟ್ರ 2–1ರಿಂದ ಉತ್ತರಾಖಂಡ ವಿರುದ್ಧ; ಕೇರಳ 2–0ರಿಂದ ರಾಜಸ್ಥಾನ ಎದುರು ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.