ನವದೆಹಲಿ: ಭಾರತದ ಪ್ರಣತಿ ನಾಯಕ್ ಅವರು ಗುರುವಾರ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಚಾಂಪಿಯನ್‌ಷಿಪ್‌ನ ವಾಲ್ಟ್ ವಿಭಾಗದ ಫೈನಲ್‌ಗೆ ಅರ್ಹತೆ ಗಳಿಸಿದರು.
ಮಂಗೋಲಿಯಾದ ಉಲನ್‌ಬಾತರ್‌ನಲ್ಲಿ ನಡೆಯುತ್ತಿರುವ ಕೂಟದ ಅರ್ಹತಾ ವಿಭಾಗದಲ್ಲಿ 13.35 ಪಾಯಿಂಟ್‌ಗಳೊಂದಿಗೆ ಅವರು ಆರನೇ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ರಾಕೇಶ್‌ಕುಮಾರ್ 10ನೇ ಸ್ಥಾನ ಪಡೆದರು. ಆದರೆ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು.
ಪ್ರಣತಿ ನಾಯಕ್, ಪ್ರಣತಿ ದಾಸ್, ಶ್ರದ್ಧಾ ತಳೇಕರ್ ಹಾಗೂ ಪಪಿಯಾ ದಾಸ್ ಅವರನ್ನೊಳಗೊಂಡ ಭಾರತ ಮಹಿಳಾ ತಂಡವು 131.250 ಪಾಯಿಂಟ್ ಗಳಿಸಿ ಅರ್ಹತಾ ಸುತ್ತು ಪೂರ್ಣಗೊಳಿಸಿತು. ರಾಕೇಶ್‌ಕುಮಾರ್ ಪಾತ್ರಾ, ಯೋಗೇಶ್ವರ್ ಸಿಂಗ್, ಆರಿಕ್ ಡೇ ಹಾಗೂ ದೇಬಾಂಗ್ ಡೇ ಅವರನ್ನು ಹೊಂದಿದ್ದ ಭಾರತ ಪುರುಷರ ತಂಡವು 229.699 ಪಾಯಿಂಟ್‌ಗಳೊಂದಿಗೆ ಅರ್ಹತಾ ಸುತ್ತು ಕೊನೆಗೊಳಿಸಿತು.
‘ಎಲ್ಲ ತಂಡಗಳ ಸ್ಪರ್ಧೆಯ ಬಳಿಕ ರ‍್ಯಾಂಕಿಂಗ್ ತಿಳಿಯಲಿದೆ’ ಎಂದು ಭಾರತ ಜಿಮ್ನಾಸ್ಟಿಕ್ ಫೆಡರೇಷನ್ ಉಪಾಧ್ಯಕ್ಷ ರಿಯಾಜ್ ಅಹ್ಮದ್ ಭಾಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.