ಚೆನ್ನೈ: ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಶುಕ್ರವಾರ ಇರಾನ್‌ನ ಅಮಿನ್ ತಬಾತಬೇಯಿ ಅವರನ್ನು ಸೋಲಿಸಿ ಒಂಟಿಯಾಗಿ ಅಗ್ರಸ್ಥಾನಕ್ಕೇರಿದರು.
ಅಜೇಯರಾಗಿರುವ ಅರ್ಜುನ್ 3.5 ಪಾಯಿಂಟ್ಸ್ ಕಲೆಹಾಕಿದ್ದಾರೆ. ಎಂಟು ಆಟಗಾರರ ಮಾಸ್ಟರ್ಸ್ ವಿಭಾಗದಲ್ಲಿ ಇತರ ಮೂರು ಪಂದ್ಯಗಳು ಡ್ರಾ ಆದವು. ವಿದಿತ್ ಗುಜರಾತಿ ಮತ್ತು ಅರವಿಂದ ಚಿದಂಬರಂ ಅವರು ಕ್ರಮವಾಗಿ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ಲೆವೊನ್ ಅರೋನಿಯನ್ ಜೊತೆ ಡ್ರಾ ಮಾಡಿಕೊಂಡರು.
ಪರ್ಹಾಮ್ ಮಘಸೂಡ್ಲೂ ಮತ್ತು ಸರ್ಬಿಯಾದ ಅಲೆಕ್ಸಿ ಸರನ ನಡುವಣ ಪಂದ್ಯವೂ ಡ್ರಾ ಮೂಲಕ ಕೊನೆಗೊಂಡಿತು.
ಪ್ರಣವ್ ಮಿಂಚು:
ಪ್ರಬಲ ಕಣವಿರುವ ಚಾಲೆಂಜರ್ ವಿಭಾಗದಲ್ಲಿ ವಿ. ಪ್ರಣವ್, ವೈಶಾಲಿ ಆರ್. ವಿರುದ್ಧ ಜಯಗಳಿಸುವ ಮೂಲಕ ಸತತ ನಾಲ್ಕನೇ ಗೆಲುವನ್ನು ದಾಖಲಿಸಿದರು. ಕಾರ್ತಿಕೇಯ ಮುರಳಿ ಸಹ ಉತ್ತಮ ಪ್ರದರ್ಶನ ನೀಡಿ ದ್ರೋಣವಲ್ಲಿ ಹಾರಿಕಾ ಅವರನ್ನು ಸೋಲಿಸಿದರು.
ರೌನಕ್ ಸಾಧ್ವಾನಿ ಮತ್ತು ಪ್ರಾಣೇಶ್ ಎಂ. ನಡುವಣ ಹೋರಾಟದ ಪಂದ್ಯ ಡ್ರಾ ಆಯಿತು. ಲಿಯೊನ್ ಮೆಂಡೊನ್ಕಾ ಮತ್ತು ಅಭಿಮನ್ಯು ಪುರಾಣಿಕ್ ಕೂಡ ಪಾಯಿಂಟ್ಸ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.