ಬೆಂಗಳೂರು: ಅಮೋಘ ಆಟವಾಡಿದ ಅಗ್ರಶ್ರೇಯಾಂಕದ ಆಟಗಾರ್ತಿ ಕರ್ನಾಟಕದ ಪ್ರತಿಮಾ ರಾವ್ ಹಾಗೂ ಎರಡನೇ ಶ್ರೇಯಾಂಕಿತ ವೀರಸಾಮಿ ಶೇಖರ್ ಅವರು ಕೆಎಸ್‌ಎಲ್‌ಟಿಎ–ಎಐಟಿಎ ವ್ಹೀಲ್‌ಚೇರ್ ಟೆನಿಸ್ ಟೂರ್ನಿಯ ಫೈನಲ್‌ಗೆ ಕಾಲಿಟ್ಟರು.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿ) ಅಂಗಳದಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪ್ರತಿಮಾ ಅವರು 6–4, 6–1ರಿಂದ ಕರ್ನಾಟಕದ ನಳಿನಾ ಕುಮಾರಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ರಾಜ್ಯದ ಕೆ.ಪಿ.ಶಿಲ್ಪಾ 6-0, 6-0ಯಿಂದ ಎ.ಸುಧಾ ಎದುರು ಗೆದ್ದು ಪ್ರಶಸ್ತಿ ಸುತ್ತು ತಲುಪಿದರು.
ಪುರುಷ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ವೀರಸಾಮಿ 6-3, 6-0ರಿಂದ ಮೂರನೇ ಶ್ರೇಯಾಂಕದ ತಮಿಳುನಾಡು ಆಟಗಾರ ಕರುಣಾಕರನ್ ಕಾರ್ತಿಕ್ ಸವಾಲು ಮೀರಿದರು. ಪ್ರಶಸ್ತಿಗಾಗಿ ಅವರು ನಾಲ್ಕನೇ ಶ್ರೇಯಾಂಕದ, ತಮಿಳುನಾಡಿನ ಸುಬ್ರಮಣ್ಯನ್ ಬಾಲಚಂದ್ರ ಅವರೊಂದಿಗೆ ಸೆಣಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಸುಬ್ರಮಣ್ಯನ್ 6-1, 6-2ರಿಂದ ತಮ್ಮದೇ ರಾಜ್ಯದ ದುರೈ ಮರಿಯಪ್ಪನ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.