ಅಹಮದಾಬಾದ್: ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್ ಪಂದ್ಯ ಗುರುವಾರ 28–28ರಲ್ಲಿ ಸಮಬಲಗೊಂಡಿತು. ಇದು ಹತ್ತನೇ ಆವೃತ್ತಿಯಲ್ಲಿ ‘ಟೈ’ ಆದ ಮೊದಲ ಪಂದ್ಯ ಎನಿಸಿತು.
ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ಜೈಪುರ ತಂಡದ ಪರ ರೈಡರ್ ಭವಾನಿ ರಜಪೂತ್ 10 ರೈಡಿಂಗ್ ಪಾಯಿಂಟ್‌ನೊಡನೆ ಸೂಪರ್ ಟೆನ್ ಸಾಧಿಸಿದರು. ಆರಂಭದಲ್ಲಿ ಜೈಪುರ ತಂಡವೇ ಮೇಲುಗೈ ಪಡೆಯುವಂತೆ ಕಂಡಿತು. ಆದರೆ ಶ್ರೀಕಾಂತ್ ಜಾಧವ್ ಅವರ ‘ಡು ಆರ್ ಡೈ’ ರೈಡ್‌ನಲ್ಲಿ ಪಾಯಿಂಟ್ ಗಳಿಸಿದ ನಂತರ ವಾರಿಯರ್ಸ್ ತಂಡ ಸಮಬಲದ ಹೋರಾಟ ನೀಡತೊಡಗಿತು.
ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೆಟ್ಸ್ ತಂಡ 33–30 ಪಾಯಿಂಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡದ ಗೆಲುವಿನ ಓಟಕ್ಕೆ ವಿರಾಮ ಹಾಕಿತು. ಗುಜರಾತ್‌ಗೆ ಇದು ಲೀಗ್‌ನ ಮೊದಲ ಸೋಲು. ಆತಿಥೇಯ ತಂಡ ಮೊದಲ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಗುಜರಾತ್ ಪರ ರಾಕೇಶ್ 11 ಪಾಯಿಂಟ್ಸ್ ಗಳಿಸಿದರು. ಸಾಂಘಿಕ ಆಟ ಪ್ರದರ್ಶಿಸಿದ ಪಟ್ನಾ ಪರ ಸುಧಾಕರ್ ಆರು ಪಾಯಿಂಟ್ಸ್ ಗಳಿಸಿದರು. ಅಂಕಿತ್ ಮತ್ತು ನೀರಜ್ ಕುಮಾರ್ ತಲಾ ನಾಲ್ಕು ಟ್ಯಾಕಲ್ ಪಾಯಿಂಟ್ಸ್ ಸಂಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.