ಬೆಂಗಳೂರು: ಪವನ್ ಶೆರಾವತ್ ಅವರು ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಇತಿಹಾಸದಲ್ಲಿ ಅತ್ಯಂತ ಬೆಲೆಯುಳ್ಳ ಆಟಗಾರ ಎನಿಸಿಕೊಂಡರು.
ಒಂಬತ್ತನೇ ಅವೃತ್ತಿಯ ಟೂರ್ನಿಗೆ ಶುಕ್ರವಾರ ನಡೆದ ಹರಾಜಿನಲ್ಲಿ ತಮಿಳು ತಲೈವಾಸ್ ಫ್ರಾಂಚೈಸಿ, ₹ 2.26 ಕೋಟಿ ಮೊತ್ತಕ್ಕೆ ಪವನ್ ಅವರನ್ನು ತನ್ನದಾಗಿಸಿಕೊಂಡಿತು. ಪಿಕೆಎಲ್ ಹರಾಜಿನಲ್ಲಿ ಯಾವುದೇ ಆಟಗಾರ ಇದುವರೆಗೆ ಇಷ್ಟು ದೊಡ್ಡ ಮೊತ್ತ ಪಡೆದಿಲ್ಲ.
₹ 1.70 ಕೋಟಿ ಪಡೆದ ವಿಕಾಸ್ ಖಂಡೋಲ ಅವರು ಅತ್ಯಧಿಕ ಬೆಲೆಯುಳ್ಳ ಎರಡನೇ ಆಟಗಾರ ಎನಿಸಿಕೊಂಡರು. ವಿಕಾಸ್ ಅವರನ್ನು ಬೆಂಗಳೂರು ಬುಲ್ಸ್ ತನ್ನದಾಗಿಸಿಕೊಂಡಿತು.ಪವನ್ ಅವರಿಗಾಗಿ ಹರಿಯಾಣ ಸ್ಟೀಲರ್ಸ್, ಯು ಮುಂಬಾ ಮತ್ತು ತಲೈವಾಸ್ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ತಲೈವಾಸ್ ತಂಡದ ಪಾಲಾದರು.
ಇರಾನ್‌ನ ಫಜಲ್ ಅತ್ರಾಚಲಿ ಅವರು ಅಧಿಕ ಬೆಲೆ ಪಡೆದ ವಿದೇಶದ ಆಟಗಾರ ಎನಿಸಿದರು. ಪುಣೇರಿ ಪಲ್ಟನ್ ₹ 1.30 ಕೋಟಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.
ಆಟಗಾರರನ್ನು ಎ,ಬಿ,ಸಿ ಮತ್ತು ಡಿ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ‘ಎ’ ವಿಭಾಗದವರಿಗೆ ಗರಿಷ್ಠ ಮೂಲ ಬೆಲೆ ₹ 30 ಲಕ್ಷ, ‘ಬಿ’ ವಿಭಾಗದವರಿಗೆ ₹ 20 ಲಕ್ಷ, ‘ಸಿ’ ವಿಭಾಗದವರಿಗೆ ₹ 10 ಲಕ್ಷ ಮತ್ತು ‘ಡಿ’ ವಿಭಾಗದವರಿಗೆ ₹ 6 ಲಕ್ಷ ನಿಗದಿಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.