ನೊಯ್ಡಾ: ಸಾಂಘಿಕ ಆಟ ಪ್ರದರ್ಶಿಸಿದ ತಮಿಳು ತಲೈವಾಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ 46–31ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.
ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ 2 (18–16) ಪಾಯಿಂಟ್ಸ್ಗಳಿಂದ ಮುನ್ನಡೆಯಲ್ಲಿದ್ದ ತಲೈವಾಸ್ ತಂಡವು ಉತ್ತರಾರ್ಧದಲ್ಲಿ ಪಾರಮ್ಯ ಮೆರೆದು, 15 ಅಂಕಗಳ ಅಂತರದ ಜಯ ಸಾಧಿಸಿತು.
ತಲೈವಾಸ್ ತಂಡಕ್ಕೆ 10 ಪಂದ್ಯಗಳಲ್ಲಿ ಇದು ನಾಲ್ಕನೇ ಗೆಲುವಾಗಿದೆ. ಒಂದನ್ನು ಟೈ ಮಾಡಿಕೊಂಡಿದ್ದರೆ, ಐದರಲ್ಲಿ ಸೋತಿದೆ. ವಾರಿಯರ್ಸ್ ತಂಡವೂ ಅಷ್ಟೇ ಪಂದ್ಯಗಳನ್ನು ಆಡಿ ಐದರಲ್ಲಿ ಸೋತಂತಾಗಿದೆ. ಮೂರರಲ್ಲಿ ಗೆದ್ದರೆ, ಎರಡರಲ್ಲಿ ಟೈ ಮಾಡಿಕೊಂಡಿದೆ.
ರೇಡರ್ ವಿಶಾಲ್ ಚಾಹಲ್ ಸೂಪರ್ ಟೆನ್ (12) ಸಾಧನೆ ಮೆರೆದರು. ಅವರಿಗೆ ಮೊಯಿನ್ ಶಾಫಾಘಿ (6) ಸಾಥ್ ನೀಡಿದರು. ಟ್ಯಾಕಲ್ನಲ್ಲಿ ಅಮೀರ್ ಹುಸೇನ್ ಬಸ್ತಾಮಿ (7) ಮತ್ತು ನಿತೇಶ್ ಕುಮಾರ್ (6) ಗಮನ ಸೆಳೆದರು. ವಾರಿಯಸ್ ಪರ ರೇಡರ್ಗಳಾದ ವಿಶ್ವಾಸ್ ಎಸ್. ಮತ್ತು ನಿತಿನ್ ಕುಮಾರ್ ಕ್ರಮವಾಗಿ 9 ಮತ್ತು 8 ಪಾಯಿಂಟ್ಸ್ ಕಲೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.