ದೆಹಲಿ: ನಾಯಕ ಮಣಿಂದರ್ ಸಿಂಗ್ (11) ಮತ್ತು ನಿತಿನ್ ಕುಮಾರ್ (13) ಅವರ ಅಮೋಘ ರೈಡಿಂಗ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ 100ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡವನ್ನು 45–38 ಪಾಯಿಂಟ್ಸ್‌ಗಳಿಂದ ಸೋಲಿಸಿ ಐದು ಅಂಕಗಳನ್ನು ಕಲೆಹಾಕಿತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ಪರ ಪ್ರಮುಖ ರೈಡರ್ ಆಶು ಮಲಿಕ್ ಹೋರಾಟ ತೋರಿ 14 ಟಚ್ ಪಾಯಿಂಟ್ಸ್ ಸಹಿತ 17 ಪಾಯಿಂಟ್ಸ್ ಗಳಿಸಿದರೂ, ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಇತರ ಆಟಗಾರರಿಂದ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. ಒಂದೆಡೆ ಬೆಂಗಾಲ್ ತಂಡ ಹ್ಯಾಟ್ರಿಕ್ ಸೋಲಿನಿಂದ ಹೊರಬಂದರೆ, ಇನ್ನೊಂದೆಡೆ ದಬಾಂಗ್ ತಂಡ ಮೂರು ಪಂದ್ಯಗಳ ಸತತ ಗೆಲುವಿನ ನಂತರ ಸೋಲಿಗೀಡಾಯಿತು.
ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 34–30 ಪಾಯಿಂಟ್‌ಗಳಿಂದ ಗುಜರಾತ್ ಜೈಂಟ್ಸ್ ಮೇಲೆ ಜಯಗಳಿಸಿತು. ಗುಜರಾತ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮುನ್ನಡೆಯಲ್ಲಿತ್ತು.
ಶನಿವಾರದ ಪಂದ್ಯಗಳು: ಯು.ಪಿ. ಯೋಧಾಸ್ –ಯು ಮುಂಬಾ (ರಾತ್ರಿ 8), ದಬಾಂಗ್ ದಿಲ್ಲಿ– ತೆಲುಗು ಟೈಟನ್ಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.