ಹೈದರಾಬಾದ್: ದೇವಾಂಕ್ (25 ಪಾಯಿಂಟ್ಸ್) ಅವರ ಅಮೋಘ ರೇಡಿಂಗ್ ಸಾಹಸದಿಂದ ಪಟ್ನಾ ಪೈರೇಟ್ಸ್ ತಂಡ ಹಿನ್ನಡೆಯಿಂದ ಚೇತರಿಸಿಕೊಂಡು ಪ್ರೊ ಕಬಡ್ಡಿ ಲೀಗ್‌ನ ಕುತೂಹಲಕರ ಪಂದ್ಯದಲ್ಲಿ ಶುಕ್ರವಾರ ತಮಿಳ್ ತಲೈವಾಸ್ ತಂಡವನ್ನು 42–40 ಪಾಯಿಂಟ್‌ಗಳಿಂದ ಸೋಲಿಸಿತು. ಹಾಲಿ ಲೀಗ್‌ನಲ್ಲಿ ಎರಡನೇ ಪಂದ್ಯವಾಡಿದ ಪೈರೇಟ್ಸ್ ಮೊದಲ ಜಯ ದಾಖಲಿಸಿತು.
ರೇಡರ್ ನರೇಂದರ್ ಖಂಡೊಲಾ ಅವರ ನೇತೃತ್ವದಲ್ಲಿ ತಲೈವಾಸ್ ತಂಡ ಉತ್ತಮ ಆರಂಭ ಮಾಡಿತ್ತು. ಅವರಿಗೆ ರೇಡಿಂಗ್‌ನಲ್ಲಿ ಸಚಿನ್ ಮತ್ತು ರಕ್ಷಣಾ ವಿಭಾಗದಲ್ಲಿ ನಿತೇಶ್ ಬೆಂಬಲ ನೀಡಿದ್ದರು. ಗಚ್ಚಿಬೌಲಿಯ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಂತರದ ವೇಳೆಗೆ ತಲೈವಾಸ್ ತಂಡ 5 ಪಾಯಿಂಟ್‌ಗಳ ಉತ್ತಮ ಮುನ್ನಡೆ ಪಡೆದಿತ್ತು. ಖಂಡೋಲಾ ವಿರಾಮಕ್ಕೆ ಮೊದಲೇ ಸೂಪರ್ ಟೆನ್ ಪೂರೈಸಿದ್ದರು.
ಆದರೆ ವಿರಾಮದ ಬಳಿಕ ದೇವಾಂಕ್ ಅವರದ್ದೇ ಕಾರುಬಾರು. ಒಂದರ ಹಿಂದೆ ಒಂದರಂತೆ ಯಶಸ್ವಿಯಾಗಿ ರೇಡ್‌ಗಳನ್ನು ನಡೆಸಿ ತಂಡ ಮುನ್ನಡೆ ಪಡೆಯುವಂತೆ ನೋಡಿಕೊಂಡರು.
ತಲೈವಾಸ್ ಪರ ನರೇಂದರ್ ಖಂಡೊಲಾ 15 ಪಾಯಿಂಟ್ ಮತ್ತು ಸಚಿನ್ 6 ಪಾಯಿಂಟ್ಸ್ ಕಲೆಹಾಕಿದರು. ನಿತೀಶ್ 4 ಪಾಯಿಂಟ್ ಗಳಿಸಿದರು.
ಬುಲ್ಸ್‌ಗೆ ನಾಲ್ಕನೇ ಸೋಲು:
ಹತ್ತನೇ ಆವೃತ್ತಿಯ ವಿಜೇತ ಪುಣೇರಿ ಪಲ್ಟನ್ ತಂಡ ದಿನದ ಎರಡನೇ ಪಂದ್ಯದಲ್ಲಿ 14 ಪಾಯಿಂಟ್‌ಗಳಿಂದ (32–22) ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು. ಇದು ಪಲ್ಟನ್‌ಗೆ 4 ಪಂದ್ಯಗಳಲ್ಲಿ ಮೂರನೇ ಜಯ. ಬುಲ್ಸ್‌ಗೆ ಸತತ ನಾಲ್ಕನೇ ಸೋಲು.
ಪುಣೆ ಪರ ಪಂಕಜ್ ಮೋಹಿತೆ ಮತ್ತು ಮೋಹಿತ್ ಗೋಯತ್ ತಲಾ 6 ಪಾಯಿಂಟ್ಸ್ ಪಡೆದರು. ಬುಲ್ಸ್ ಪರ ಆಲ್‌ರೌಂಡರ್ ಪಂಕಜ್ 6 ಪಾಯಿಂಟ್ಸ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.