ಬೆಂಗಳೂರು: ಕನ್ನಡದ ಚಿತ್ರನಟ ಸುದೀಪ್ ಅವರು ಪ್ರೊ ಕಬಡ್ಡಿ ಲೀಗ್‌ನ ಸೀಸನ್ 11 ಜಾಹೀರಾತು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಬುಲ್ಸ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಪ್ರೊ ಕಬಡ್ಡಿ ಲೀಗ್ ಇದೇ 18ರಂದು ಸಂಜೆ 7.30ಕ್ಕೆ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.
ಪಿಕೆಎಲ್‌ನ ಅಧಿಕೃತ ಪ್ರಸಾರ ಸಂಸ್ಥೆಯಾದ ಸ್ಟಾರ್ ಸ್ಪೋರ್ಟ್ಸ್ ಈ ಅಭಿಯಾನ ಅರಂಭಿಸಿದೆ. ಬೆಂಗಳೂರು ಬುಲ್ಸ್‌ನ ಶಕ್ತಿ ಮತ್ತು ಸಾಮರ್ಥ್ಯವನ್ನು ಸುದೀಪ್ ಈ ಜಾಹೀರಾತಿನ ಮೂಲಕ ಬಿಂಬಿಸಿದ್ದಾರೆ.
‘ಪ್ರೊ ಕಬಡ್ಡಿ ಲೀಗ್ ಮತ್ತು ನನ್ನ ಸಂಬಂಧ ಹಲವು ವರ್ಷಗಳದ್ದು’ ಎಂದು ಸುದೀಪ್ ಜಾಹೀರಾತು ಕುರಿತು ಹೇಳಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್ ತಂಡವು, ತೆಲುಗು ಟೈಟನ್ಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.