ಒಡೆನ್ಸ್, ಡೆನ್ಮಾರ್ಕ್: ಶಿಸ್ತಿನ ಆಟವಾಡಿದ ಭಾರತದ ಪಿ.ವಿ. ಸಿಂಧು ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21–19, 21–12 ರಿಂದ ಥಾಯ್ಲೆಂಡ್‌ನ ಸುಪನಿದ ಕಟೆಥಾಂಗ್ ಅವರನ್ನು ಮಣಿಸಿದರು. ಸಿಂಧು ಅವರು ಕಳೆದ ವಾರ ನಡೆದಿದ್ದ ಆರ್ಕಟಿಕ್ ಓಪನ್ ಟೂರ್ನಿಯಲ್ಲೂ ಸೆಮಿಫೈನಲ್ ಪ್ರವೇಶಿಸಿದ್ದರು.
ಭಾರತದ ಆಟಗಾರ್ತಿ ಶನಿವಾರ ನಡೆಯಲಿರುವ ನಾಲ್ಕರಘಟ್ಟದ ಪಂದ್ಯದಲ್ಲಿ ಸ್ಪೇನ್‌ನ ಕರೊಲಿನಾ ಮರಿನ್ ಅವರನ್ನು ಎದುರಿಸಲಿದ್ದಾರೆ.
ಸುಪನಿದ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ ಪ್ರಬಲ ಪೈಪೋಟಿ ಕಂಡುಬಂತು. ಆದರೆ ಎರಡನೇ ಗೇಮ್‌ನಲ್ಲಿ ಸಿಂಧು ಪೂರ್ಣ ಪ್ರಭುತ್ವ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.