ADVERTISEMENT

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಮೊದಲ ಸುತ್ತಿನಲ್ಲೇ ಸಿಂಧುಗೆ ಸೋಲು

ತ್ರಿಶಾ–ಗಾಯತ್ರಿಗೆ ಜಯ

ಪಿಟಿಐ
Published 16 ಮಾರ್ಚ್ 2023, 1:41 IST
Last Updated 16 ಮಾರ್ಚ್ 2023, 1:41 IST
ತ್ರಿಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್‌
ತ್ರಿಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್‌   

ಬರ್ಮಿಂಗ್‌ಹ್ಯಾಮ್‌: ಭಾರತದ ಪಿ.ವಿ. ಸಿಂಧು ಅವರು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಬುಧವಾರ ಸಿಂಧು 17-21, 11-21ರಿಂದ ಚೀನಾದ ಜಾಂಗ್‌ ಯಿ ಮನ್ ಎದುರು ಸೋಲನುಭವಿಸಿದರು.

ಸಿಂಧು ಅವರು ಈ ವರ್ಷ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಜನವರಿಯಲ್ಲಿ ನಡೆದ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ಮತ್ತು ಅದೇ ತಿಂಗಳು ಇಂಡಿಯಾ ಓಪನ್‌ನಲ್ಲಿ ಅವರು ಮೊದಲ ತಡೆ ದಾಟುವಲ್ಲಿ ವಿಫಲರಾಗಿದ್ದರು.

ADVERTISEMENT

ಪಂದ್ಯದ ಮೊದಲ ಗೇಮ್‌ನಲ್ಲಿ 6–5ರಿಂದ ಮುಂದಿದ್ದ ಸಿಂಧು, ಬಳಿಕ 16–13ಕ್ಕೆ ಮುನ್ನಡೆದರು. ಆದರೆ ಸತತ 7 ಪಾಯಿಂಟ್ಸ್ ಗಳಿಸಿದ ಜಾಂಗ್‌ 20–16ರಿಂದ ಮೇಲುಗೈ ಸಾಧಿಸಿ 21 ನಿಮಿಷಗಳಲ್ಲಿ ಗೇಮ್ ಗೆದ್ದರು.

ಎರಡನೇ ಗೇಮ್‌ ಒಂದು ಹಂತದಲ್ಲಿ 5–5ರಿಂದ ಸಮಬಲವಾಗಿತ್ತು. ಬಳಿಕ ಜಾಂಗ್‌ 10–5ರಿಂದ ಮುಂದುವರಿದರು. ಆ ಬಳಿಕ ಗೇಮ್‌ ಹಾಗೂ ಪಂದ್ಯ ಗೆದ್ದು ಬೀಗಿದರು.

ತ್ರಿಶಾ– ಗಾಯತ್ರಿಗೆ ಜಯ: ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಭಾರತದ ತ್ರಿಶಾ ಜೋಲಿ– ಗಾಯತ್ರಿ ಗೋಪಿಚಂದ್‌ 21-18, 21-14ರಿಂದ ಥಾಯ್ಲೆಂಡ್‌ನ ಜೊಂಗ್‌ಕೊಲ್ಪನ್‌ ಕಿತಿತಾರಕುಲ್‌– ರವಿಂದಾ ಪ್ರಜೊಂಗ್‌ಜಾಯ್‌ ಎದುರು ಗೆದ್ದರು.

ಶ್ರೀಕಾಂತ್‌ಗೆ ಜಯ: ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಕಿದಂಬಿ ಶ್ರೀಕಾಂತ್ 19-21, 21-14, 21-5ರಿಂದ ಫ್ರಾನ್ಸ್‌ನ ತೊಮಾ ಜೂನಿ ಯರ್ ಪೊಪೊವ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.