ADVERTISEMENT

Malaysia Masters final: ಚೀನಾ ಆಟಗಾರ್ತಿ ವಿರುದ್ಧ ಸೋತ ಪಿ.ವಿ. ಸಿಂಧು

ಪಿಟಿಐ
Published 26 ಮೇ 2024, 9:50 IST
Last Updated 26 ಮೇ 2024, 9:50 IST
PV Sindhu
PV Sindhu   

ಕ್ವಾಲಾಲಂಪುರ(ಮಲೇಷ್ಯಾ): ಭಾರತದ ಬ್ಯಾಡ್ಮಿಂಟನ್ ತಾರೆ, ಎರಡು ಬಾರಿಯ ಒಲಿಂಪಿಕ್ ಮೆಡಲಿಸ್ಟ್ ಪಿ.ವಿ. ಸಿಂಧು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಸೋತು ನಿರಾಸೆ ಮೂಡಿಸಿದ್ದಾರೆ.

ಚೀನಾ ಎದುರಾಳಿ ವಿರುದ್ಧ ಅವರು 21-16, 5-21 ಮತ್ತು 16-21 ಸೆಟ್‌ಗಳಿಂದ ಸೋತು ನಿರ್ಗಮಿಸಿದರು.

ಮೊದಲ ಸೆಟ್‌ನಲ್ಲಿ 21–16ರ ಮೂಲಕ ಗೆಲುವು ಸಾಧಿಸುವ ಮೂಲಕ ಸಿಂಧು ಉತ್ತಮ ಆರಂಭ ಮಾಡಿದ್ದರು. ಎರಡನೇ ಸೆಟ್‌ನಲ್ಲಿ ಚೀನಾದ ಆಟಗಾರ್ತಿ ಕಮ್‌ಬ್ಯಾಕ್ ಮಾಡಿದರು. ಬಳಿಕ, ಮೂರನೇ ಸೆಟ್‌ನಲ್ಲೂ ಸಿಂಧುಗೆ ಅವಕಾಶ ನೀಡದೆ 21–16 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ.

ADVERTISEMENT

ಶನಿವಾರ, ನಡೆದ ಸೆಮಿಫೈನಲ್‌ನಲ್ಲಿ ಬೂಸನ್‌ನ ಆಂಗ್ಬಾಮೃಗ್‌ಫಾನ್ ಅವರ ವಿರುದ್ಧ 13–21, 21–16 ಮತ್ತು 21–12 ಸೆಟ್‌ಗಳಿಂದ ಗೆದ್ದು ಸಿಂಧು ಫೈನಲ್‌ಗೆ ಏರಿದ್ದರು.

ಶುಕ್ರವಾರ ಚೀನಾದ ನಂ.6 ಶ್ರೇಯಾಂಕಿತ ಆಟಗಾರ್ತಿ ಹಾನ್ ಯೂ ಅವರನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.