ಬೆಂಗಳೂರು: ಅರವಿಂದ್ ರಾಘವನ್ ಅವರು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಬುಧವಾರ ನಡೆದ ನೂತನ ಆಡಳಿತ ಸಮಿತಿಯ ಮೊದಲ ಸಭೆಯಲ್ಲಿ ಅರವಿಂದ್ ಅವರನ್ನು ಆಯ್ಕೆ ಮಾಡಲಾಯಿತು. ಸೋಮವಾರ ನಡೆದಿದ್ದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ 2023–24ನೇ ಸಾಲಿಗೆ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸ್ಟಿವರ್ಡ್ಸ್: ಅರವಿಂದ್ ರಾಘವನ್, ಶಂಕರ್ ಬಾಲು, ಟಿಎಚ್‌ಆರ್ ರಾಜೀವ.
ಸರ್ಕಾರದಿಂದ ನಾಮನಿರ್ದೇಶಿತರು: ಕರ್ನಾಟಕ ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್.
ಸಮಿತಿ ಸದಸ್ಯರು: ದರ್ಶನ್ ಲೋಕೇಶ್, ದಯಾನಂದ ಆರ್. ಮಾಂಡ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.