ನವದೆಹಲಿ: ಮುಂದಿನ ತಿಂಗಳು ನಿಗದಿಯಾಗಿರುವ ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ರಾಣಿ ರಾಂಪಾಲ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಉಪನಾಯಕಿ ಸವಿತಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಟೂರ್ನಿಯು ದಕ್ಷಿಣ ಕೊರಿಯಾದ ಡಾಂಗೇಯಲ್ಲಿ ಡಿಸೆಂಬರ್ 5ರಿಂದ 12ರವರೆಗೆ ಟೂರ್ನಿ ನಿಗದಿಯಾಗಿದೆ.
ಭಾರತ ಡಿಸೆಂಬರ್ 5ರಂದು ತನ್ನ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡಕ್ಕೆ ಮುಖಾಮುಖಿಯಾಗಲಿದೆ. ಡಿಸೆಂಬರ್ 12ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ರಾಣಿ ಅವರು ಬೆಂಗಳೂರಿನಲ್ಲಿ ಪುನಃಶ್ಚೇತನ ಶಿಬಿರದಲ್ಲಿದ್ದು, ಎಐಎಚ್ ವರ್ಷದ ಗೋಲ್‌ಕೀಪರ್ ಪ್ರಶಸ್ತಿ ವಿಜೇತ ಸವಿತಾ ತಂಡದ ನಾಯಕತ್ರವ ವಹಿಸುವರು. ದೀಪ್ ಗ್ರೇಸ್ ಎಕ್ಕಾ ಉಪನಾಯಕಿ ಆಗಿರುವರು.
ಫಾರ್ವರ್ಡ್ ಆಟಗಾರ್ತಿಯರಾದ ಲಾಲ್‌ರೆಮ್ಸಿಯಾಮಿ, ಶರ್ಮಿಳಾ ದೇವಿ ಮತ್ತು ಸಲೀಮಾ ಟೆಟೆ ಟೂರ್ನಿಗೆ ಲಭ್ಯವಿಲ್ಲ. ಈ ಮೂವರು ಸದ್ಯ ಜೂನಿಯರ್ ತಂಡದ ಭಾಗವಾಗಿದ್ದು, ಡಿಸೆಂಬರ್ 5ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್‌ನಲ್ಲಿ ಆಡಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಭಾರತ ಮಹಿಳಾ ತಂಡ ಕಣಕ್ಕಿಳಿಯುತ್ತಿರುವ ಮೊದಲ ಟೂರ್ನಿ ಇದು. 2018ರಲ್ಲಿ ನಡೆದ ಈ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡವು ಕೊರಿಯಾ ಎದುರು ಸೋತು ರನ್ನರ್ ಅಪ್ ಆಗಿತ್ತು.
ತಂಡ:
ಗೋಲ್‌ಕೀಪರ್‌ಗಳು: ಸವಿತಾ (ನಾಯಕಿ), ರಜನಿ ಎತಿಮರ್ಪು.
ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಉದಿತಾ, ನಿಕ್ಕಿ ಪ್ರಧಾನ್, ಗುರ್ಜಿತ್ ಕೌರ್
ಮಿಡ್‌ಫೀಲ್ಡರ್ಸ್: ನಿಶಾ, ಸುಶೀಲಾ ಚಾನು ಪುಖ್ರಂಬಮ್, ನಮಿತಾ ಟೊಪ್ಪೊ, ಮೋನಿಕಾ, ನೇಹಾ, ಜ್ಯೋತಿ, ಲಿಲಿಮಾ ಮಿನ್ಜ್.
ಫಾರ್ವರ್ಡ್ಸ್: ನವನೀತ್ ಕೌರ್, ವಂದನಾ ಕಟಾರಿಯಾ, ರಾಜ್ವಿಂದರ್ ಕೌರ್, ಮರಿಯಾನಾ ಕುಜೂರ್, ಸೋನಿಕಾ.
ಭಾರತ ಆಡುವ ಪಂದ್ಯಗಳು(ದಿನಾಂಕ;ಎದುರಾಳಿ)ಡಿ.5;ಥಾಯ್ಲೆಂಡ್
ಡಿ.6;ಮಲೇಷ್ಯಾ
ಡಿ.8;ಕೊರಿಯಾ
ಡಿ.9;ಚೀನಾ
ಡಿ.11;ಜಪಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.