ADVERTISEMENT

ಬ್ಯಾಡ್ಮಿಂಟನ್‌: ಥಾಯ್ಲೆಂಡ್‌ ಓಪನ್‌ ಗೆದ್ದ ಸಾಯಿ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 10:18 IST
Last Updated 4 ಆಗಸ್ಟ್ 2019, 10:18 IST
   

ಬ್ಯಾಂಕಾಕ್‌: ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಮೂಲಕ ಬಿಡಬ್ಲ್ಯುಎಫ್‌ ಸೂಪರ್‌ 500 ಟೂರ್ನಿಯೊಂದರ ಚೊಚ್ಚಲ ಪ್ರಶಸ್ತಿಗೆದ್ದುಕೊಂಡು ಸಾಧನೆಗೆ ಈ ಜೋಡಿ ಪಾತ್ರವಾಗಿದೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ 22–20, 22–24, 21–9 ಗೇಮ್‌ಗಳಿಂದ ಕೊರಿಯಾದ ಕೊ ಸಂಗ್‌ ಹ್ಯುನ್‌– ಶಿನ್‌ ಬೇಕ್‌ ಚಿಯೊಲ್‌ ಜೋಡಿಯನ್ನು ಮಣಿಸಿ ಫೈನಲ್‌ ಪ್ರವೇಶ ಮಾಡಿತ್ತು.

ADVERTISEMENT

ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಚೀನಾದಲಿ ಜುನ್‌ ಹುಯ್‌ – ಲಿವು ಯು ಚೆನ್‌ ವಿರುದ್ಧ21-19, 18-21, 21-18 ಗೇಮ್‌ಗಳಿಂದ ಗೆಲುವು ದಾಖಲಿಸಿತು. ಚೀನಾದ ಪ್ರಬಲ ಪೈಪೋಟಿಯನ್ನು ಸಮ ಚಿತ್ತವಾಗಿ ಎದುರಿಸಿದ ಭಾರತೀಯ ಅಂತಿಮವಾಗಿ ಗೆಲುವಿನ ನಗೆ ಬೀರಿತು.

2019ರ ಋತುವಿನಲ್ಲಿ ಮೊದಲ ಬಾರಿ ಈ ಜೋಡಿ ಟೂರ್ನಿಯೊಂದರ ಫೈನಲ್‌ ತಲುಪಿದ್ದು ವಿಶೇಷ. ಶ್ರೇಯಾಂಕರಹಿತ ಭಾರತದ ಈ ಜೋಡಿ ಚೊಚ್ಚಲ ಥಾಯ್‌ ಪ್ರಶಸ್ತಿಯನ್ನು ಗೆದ್ದು ಬೀಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.