ADVERTISEMENT

ದೆಹಲಿ ಹಾಫ್‌ ಮ್ಯಾರಥಾನ್‌: ರೆಗಾಸ, ಐರಿನ್‌ಗೆ ಕಿರೀಟ

ಅವಿನಾಶ್ ಸಬ್ಳೆ ಮಿಂಚು

ಪಿಟಿಐ
Published 16 ಅಕ್ಟೋಬರ್ 2022, 14:36 IST
Last Updated 16 ಅಕ್ಟೋಬರ್ 2022, 14:36 IST
ಕೀನ್ಯಾದ ಐರಿನ್ ಚೆಪ್ಟಾಯ್– ಎಎಫ್‌ಪಿ ಚಿತ್ರ
ಕೀನ್ಯಾದ ಐರಿನ್ ಚೆಪ್ಟಾಯ್– ಎಎಫ್‌ಪಿ ಚಿತ್ರ   

ನವದೆಹಲಿ: ಇಥಿಯೋಪಿಯಾದ ಚಾಲಾ ರೆಗಾಸ ಮತ್ತು ಕೀನ್ಯಾದ ಐರಿನ್ ಚೆಪ್ಟಾಯ್ ಅವರು ದೆಹಲಿ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಭಾನುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ರೆಗಾಸ 1 ತಾಸು 30 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮಹಿಳೆಯರ ರೇಸ್‌ನಲ್ಲಿ ಐರಿನ್‌ 1 ತಾಸು 6 ನಿಮಿಷ 42 ಸೆಕೆಂಡುಗಳಲ್ಲಿ ಅಂತಿಮ ಗೆರೆ ಮುಟ್ಟಿದರು.

ಭಾರತೀಯ ಎಲೀಟ್‌ ಪುರುಷರ ವಿಭಾಗದಲ್ಲಿ ತೀವ್ರ ಪೈಪೋಟಿ ನಡೆಯಿತು. ಹಾಲಿ ಚಾಂಪಿಯನ್‌ ಅವಿನಾಶ್ ಸಬ್ಳೆ ಮತ್ತು ಕಾರ್ತಿಕ್ ಕುಮಾರ್ ಇಬ್ಬರೂ 64 ನಿಮಿಷಗಳಲ್ಲಿ ರೇಸ್‌ ಮುಗಿಸಿದರು. ಆದರೆ ಮರುಪರಿಶೀಲನೆಯ ಬಳಿಕ ಭಾರತ ಅಥ್ಲೆಟಿಕ್‌ ಫೆಡರೇಷನ್‌ನ ತಾಂತ್ರಿಕ ಅಧಿಕಾರಿಗಳು ಅವಿನಾಶ್ ಅವರನ್ನು ವಿಜೇತರೆಂದು ಘೋಷಿಸಿದರು.

ADVERTISEMENT

ಭಾರತೀಯ ಎಲೀಟ್‌ ಮಹಿಳೆಯರ ವಿಭಾಗದಲ್ಲಿ ಸಂಜೀವನಿ ಜಾಧವ್ ಕಿರೀಟ ಧರಿಸಿದರು. ಅವರು 1 ತಾಸು 17 ನಿ. 53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮೋನಿಕಾ ಅಥಾರ ಎರಡನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.