ADVERTISEMENT

ಫಾರ್ಮುಲಾ 1 ರೇಸ್‌: ಮರ್ಸಿಡೀಸ್ ತೊರೆದು ಫೆರಾರಿ ಸೇರಲಿರುವ ಲೂಯಿಸ್ ಹ್ಯಾಮಿಲ್ಟನ್‌

ರಾಯಿಟರ್ಸ್
Published 7 ನವೆಂಬರ್ 2024, 5:31 IST
Last Updated 7 ನವೆಂಬರ್ 2024, 5:31 IST
<div class="paragraphs"><p>ಲೂಯಿಸ್ ಹ್ಯಾಮಿಲ್ಟನ್‌</p></div>

ಲೂಯಿಸ್ ಹ್ಯಾಮಿಲ್ಟನ್‌

   

ರಾಯಿಟರ್ಸ್ ಚಿತ್ರ

ಬರ್ಲಿನ್‌: ಏಳು ಬಾರಿ ಫಾರ್ಮುಲಾ 1 ಚಾಂಪಿಯನ್‌ ಆಗಿದ್ದ ರೇಸರ್‌ ಲೂಯಿಸ್ ಹ್ಯಾಮಿಲ್ಟನ್ ಅವರು 2025ರಿಂದ ಫೆರಾರಿಯನ್ನು ಚಾಲನೆ ಮಾಡಲಿದ್ದಾರೆ. ಮರ್ಸಿಡೀಸ್ ಪರವಾಗಿ ಇನ್ನು ಮೂರು ರೇಸ್‌ಗಳಲ್ಲಷ್ಟೇ ಹ್ಯಾಮಿಲ್ಟನ್ ಪಾಲ್ಗೊಳ್ಳಲಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.

ADVERTISEMENT

ಆದರೆ ಕಳೆದ ವಾರ ಬ್ರೆಜಿಲ್‌ನಲ್ಲಿ ನಡೆದಿದ್ದ ಸ್ಪ್ರಿಂಟ್‌ ರೇಸ್‌ನಲ್ಲಿ ಹ್ಯಾಮಿಲ್ಟನ್‌ 11ನೇ ಸ್ಥಾನ ಹಾಗೂ ಕಳೆದ ಭಾನುವಾರ ನಡೆದ ಸಾವೊ ಪೌಲೊ ಗ್ರಾಂಡ್‌ ಪ್ರಿಕ್ಸ್‌ನಲ್ಲಿನ 10ನೇ ಸ್ಥಾನದೊಂದಿಗಿನ ಕಳಪೆ ಪ್ರದರ್ಶನದಿಂದ ಅವರು ಕಂಪನಿ ತೊರೆಯಲಿದ್ದಾರೆ ಎಂಬ ವಿಷಯ ಹರಡಿತ್ತು. ಆದರೆ ತಕ್ಷಣವೇ ಅವರು ಕಂಪನಿ ತೊರೆಯಲಿದ್ದಾರೆಯೇ ಎಂಬುದನ್ನು ಮರ್ಸಿಡೀಸ್ ಖಚಿತಪಡಿಸಿಲ್ಲ. 

ರೇಸ್‌ ನಂತರ ವಾಕಿ ಮೂಲಕ ತನ್ನ ತಂಡದೊಂದಿಗೆ ಮಾತನಾಡಿದ್ದ ಹ್ಯಾಮಿಲ್ಟನ್‌, ‘ಇದಂತೂ ಅತ್ಯಂತ ಕೆಟ್ಟ ವಾರಾಂತ್ಯವಾಗಿದೆ. ಈವರೆಗಿನ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಕಾರಾಗಿತ್ತು. ಪಿಟ್‌ ಸ್ಟಾಪ್‌ನಲ್ಲಿ ನಿಂತು ರೇಸ್‌ನ ಪ್ರತಿ ಹಂತದಲ್ಲೂ ಅದ್ಭುತ ಸಹಕಾರ ನೀಡಿದ ತಂಡಕ್ಕೆ ಧನ್ಯವಾದಗಳು. ಒಂದೊಮ್ಮೆ ಇದೇ ನನ್ನ ಕೊನೆಯ ರೇಸ್ ಆಗಿದ್ದರೆ, ಅದೊಂದು ಅವಮಾನ ಎಂದೇ ನಾನು ಭಾವಿಸಿದ್ದೇನೆ’ ಎಂದಿದ್ದರು.

‘ಈ ವರ್ಷದ ಕೊನೆಯ ಮೂರು ರೇಸ್‌ಗಳಲ್ಲಿ ಭಾಗವಹಿಸುವ ಬದಲು ಪ್ರವಾಸಕ್ಕೆ ಹೋಗುವುದೇ ಲೇಸು’ ಎಂದು ಸ್ಕೈ ಸ್ಪೋರ್ಟ್ಸ್‌ ಎಫ್‌ಗೆ ಹ್ಯಾಮಿಲ್ಟನ್ ಹೇಳಿರುವುದು ಈ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.

ನ. 24ರಲ್ಲಿ ಲಾಸ್‌ ವೆಗಾಸ್‌, ಡಿ. 1ರಂದು ಕತಾರ್‌ ಹಾಗೂ ಡಿ. 8ರಂದು ಅಬುಧಾಬಿ ರೇಸ್‌ನ ನಂತರ ಲೂಯಿಸ್ ಹ್ಯಾಮಿಲ್ಟನ್‌ ಅವರು ಕಂಪನಿಯಿಂದ ನಿರ್ಗಮಿಸಲಿದ್ದಾರೆ ಎಂದು ಮರ್ಸಿಡೀಸ್ ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

39 ವರ್ಷದ ಹ್ಯಾಮಿಲ್ಟನ್ ಅವರು ಏಳು ಬಾರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇದರಲ್ಲಿ ಮರ್ಸಿಡೀಸ್‌ ಜೊತೆಗೆ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿದ್ದಾರೆ. ಇದೇ ವರ್ಷ ನಡೆದ ಬ್ರಿಟಿಷ್‌ ಗ್ರಾಂಡ್‌ ಪ್ರಿಕ್ಸ್‌ ಹಾಗೂ ಬೆಲ್ಜಿಯನ್‌ ಗ್ರಾಂಡ್‌ ಪ್ರಿಕ್ಸ್‌ ಸೇರಿ ಎರಡು ಗೆಲುವನ್ನು ಹ್ಯಾಮಿಲ್ಟನ್ ದಾಖಲಿಸಿದ್ದರು. 2008, 2014 ಹಾಗೂ 2015ರ ಸರಣಿಯಲ್ಲಿ ಅವರು ಟ್ರೋಫಿ ಎತ್ತಿ ಹಿಡಿದಿದ್ದರು. ನಂತರ 2017ರಿಂದ 20ರವರೆಗೂ ಅವರ ವಿಜಯ ಯಾತ್ರೆ ಮುಂದುವರಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.