ADVERTISEMENT

ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ತಂಡದಿಂದ ಸ್ಮಿತ್‌ಗೆ ಕೊಕ್: ಮಾರ್ಷ್‌ಗೆ ನಾಯಕತ್ವ

ಏಜೆನ್ಸೀಸ್
Published 1 ಮೇ 2024, 19:21 IST
Last Updated 1 ಮೇ 2024, 19:21 IST
<div class="paragraphs"><p>ಮಿಚೆಲ್ ಮಾರ್ಷ್‌</p></div>

ಮಿಚೆಲ್ ಮಾರ್ಷ್‌

   

ಸಿಡ್ನಿ: ಮಾಜಿ ನಾಯಕ ಸ್ಟೀವ್‌ ಸ್ಮಿತ್ ಮತ್ತು ಉದಯೋನ್ಮುಖ ಬ್ಯಾಟರ್‌ ಜೇಕ್ ಫ್ರೇಸರ್‌ ಮೆಕ್‌ಗುರ್ಕ್ ಅವರನ್ನು ಟಿ20 ವಿಶ್ವಕಪ್ ಆಡುವ ಆಸ್ಟ್ರೇಲಿಯಾ ತಂಡಕ್ಕೆ ಪರಿಗಣಿಸಿಲ್ಲ. ಮುಂದಿನ ತಿಂಗಳು ವೆಸ್ಟ್‌ ಇಂಡೀಸ್  ಮತ್ತು ಅಮೆರಿಕದಲ್ಲಿ ನಡೆಯುವ ಟೂರ್ನಿಗೆ ತಂಡವನ್ನು ಬುಧವಾರ ಪ್ರಕಟಿಸಲಾಯಿತು.

ಆಲ್‌ರೌಂಡರ್‌ ಮಿಚೆಲ್ ಮಾರ್ಷ್‌ ನಾಯಕತ್ವ ವಹಿಸುವರು. ತಂಡದಲ್ಲಿ ಸ್ಥಾನ ಪಡೆದಿರುವ ಡೇವಿಡ್‌ ವಾರ್ನರ್‌ ಅವರಿಗೆ ಇದು ಬಹುತೇಕ ಕೊನೆಯ ಅಂತರರಾಷ್ಟ್ರೀಯ ಟೂರ್ನಿಯಾಗುವ ಸಾಧ್ಯತೆಯಿದೆ. ಟೆಸ್ಟ್ ತಂಡದ ಕ್ಯಾಪ್ಟನ್ ಪ್ಯಾಟ್‌ ಕಮಿನ್ಸ್, ವೇಗದ ಬೌಲರ್ ಮಿಚೆಲ್‌ ಸ್ಟಾರ್ಕ್, ಬಿರುಸಿನ ಹೊಡೆತಗಳ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ 15 ಆಟಗಾರರ ತಂಡದಲ್ಲಿರುವ ಅನುಭವಿಗಳಾಗಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭ ಆಟಗಾರನಾಗಿ ಸ್ಫೋಟಕ ಇನಿಂಗ್ಸ್‌ಗಳನ್ನು ಆಡುತ್ತಿರುವ 22 ವರ್ಷ ವಯಸ್ಸಿನ ಮೆಕ್‌ಗುರ್ಕ್ ಅವರ ಪ್ರದರ್ಶನದ ಮೇಲೆ ಹೆಚ್ಚಿನ ಗಮನ ಇಟ್ಟಿದ್ದೇವೆ ಎಂದು ಆಯ್ಕೆಗಾರ ಜಾರ್ಜ್‌ ಬೇಲಿ ತಿಳಿಸಿದರು.

ತಂಡ ಇಂತಿದೆ: ಮಿಚೆಲ್ ಮಾರ್ಷ್‌ (ನಾಯಕ), ಆ್ಯಷ್ಟನ್ ಅಗರ್, ಪ್ಯಾಟ್‌ ಕಮಿನ್ಸ್, ಟಿಮ್ ಡೇವಿಡ್‌, ನಥಾನ್ ಎಲ್ಲಿಸ್‌, ಕ್ಯಾಮರಾನ್ ಗ್ರೀನ್‌, ಜೋಶ್ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌, ಜೋಶ್ ಇಂಗ್ಲಿಸ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಿಚಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೊಯಿನಿಸ್‌, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್ ಮತ್ತು ಆ್ಯಡಂ ಜಂಪಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.