ADVERTISEMENT

Paris Olympics | ರೋಯಿಂಗ್‌: ರಿಪೇಚ್‌ಗೆ ಪನ್ವರ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 17:02 IST
Last Updated 27 ಜುಲೈ 2024, 17:02 IST
ಬಾಲರಾಜ್‌ ಪನ್ವಾರ್‌
ಬಾಲರಾಜ್‌ ಪನ್ವಾರ್‌   

ಚಾಟೆವುರಾಕ್ಸ್‌ ಫ್ರಾನ್ಸ್‌ (ಪಿಟಿಐ): ಭಾರತದ ಏಕೈಕ ಸ್ಪರ್ಧಿ ಬಾಲರಾಜ್‌ ಪನ್ವಾರ್‌ ಅವರು ಶನಿವಾರ ನಡೆದ ಪುರುಷರ ರೋಯಿಂಗ್ ಕ್ರೀಡೆಯ ಸಿಂಗಲ್ಸ್‌ ಸ್ಕಲ್‌ ವಿಭಾಗದ ಮೊದಲ ಹೀಟ್ಸ್‌ ನಾಲ್ಕನೇ ಸ್ಥಾನ ಪಡೆದರು. ಆದರೆ ಅವರಿಗೆ ಇನ್ನೂ ಪದಕ ಜಯಿಸುವ ಅವಕಾಶವೊಂದು ಉಳಿದಿದೆ. ಅವರು ರಿಪೇಚ್‌ನಲ್ಲಿ ಸ್ಪರ್ಧಿಸುವ ಅವಕಾಶ ಇನ್ನೂ ಇದೆ. 

25 ವರ್ಷ ವಯಸ್ಸಿನ ಪನ್ವಾರ್‌ ಅವರು 7ನಿ, 7.11 ಸೆಕೆಂಡುಗಳಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ನ್ಯೂಜಿಲೆಂಡ್‌ನ ಥಾಮಸ್‌ ಮ್ಯಾಕಿಂಟೋಷ್ (6ನಿ 55.92ಸೆ) ಮೊದಲಿಗರಾದರು. ಸ್ಟಫಾನೊಸ್‌ ನೊತುಸಕೊಸ್‌ (7ನಿ 01.79ಸೆ) ಎರಡನೇ ಮತ್ತು ಅಬ್ದೆಲ್‌ಕಲೆಕ್‌ ಎಲ್ಬನ್ನಾ (7ನಿ 05.06ಸೆ) ಮೂರನೇ  ಸ್ಥಾನದಲ್ಲಿ ಗುರಿ ತಲುಪಿದರು.

ಪ್ರತಿ ಹೀಟ್ಸ್‌ನಲ್ಲಿ  ಅಗ್ರ ಸ್ಥಾನ ಗಳಿಸಿದ  ಮೂವರು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ADVERTISEMENT

ಪನ್ವಾರ್‌ ಅವರಿಗೆ ರಿಪೇಚ್ ಮೂಲಕ ಸೆಮಿಫೈನಲ್‌ ಅಥವಾ ಫೈನಲ್‌ಗೆ ಅರ್ಹತೆ ಪಡೆಯಲು ಇನ್ನೊಂದು ಅವಕಾಶವಿದೆ. 2022ರ ಏಷ್ಯನ್‌ ಗೇಮ್ಸ್‌ನಲ್ಲಿ ನಾಲ್ಕನೇ ಸ್ಥಾನ ಮತ್ತು ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಹಾಗೂ ಒಸಿಯಾನಿಯನ್‌ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.