ADVERTISEMENT

ಪ್ರೊ ಕಬಡ್ಡಿ ಲೀಗ್: ತಲೈವಾಸ್‌ಗೆ ತಲೆಬಾಗಿದ ಪುಣೇರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:30 IST
Last Updated 23 ಅಕ್ಟೋಬರ್ 2024, 16:30 IST
ಪುಣೇರಿ ಪಲ್ಟನ್ ಎದುರಿನ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ಸಚಿನ್ ರೇಡಿಂಗ್ ನಡೆಸಿದ ಪರಿ.
ಪುಣೇರಿ ಪಲ್ಟನ್ ಎದುರಿನ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡದ ಸಚಿನ್ ರೇಡಿಂಗ್ ನಡೆಸಿದ ಪರಿ.   

ಹೈದರಾಬಾದ್‌: ರೇಡಿಂಗ್‌ ಮತ್ತು ಟ್ಯಾಕಲ್‌ ಎರಡೂ ವಿಭಾಗಗಳಲ್ಲಿ ಮಿಂಚಿದ ತಮಿಳ್‌ ತಲೈವಾಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್‌ ಪುಣೇರಿ ಪಲ್ಟನ್‌ ತಂಡಕ್ಕೆ ಆಘಾತ ನೀಡಿತು. ತಲೈವಾಸ್‌ಗೆ ಇದು ಎರಡನೇ ಗೆಲುವಾಗಿದೆ.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರದ ಮೊದಲ ಪಂದ್ಯದಲ್ಲಿ ತಲೈವಾಸ್‌ ತಂಡ 35–30 ರಲ್ಲಿ ಐದು ಪಾಯಿಂಟ್‌ಗಳಿಂದ ಹಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದ ಪುಣೇರಿ ಪಲ್ಟನ್‌ ತಂಡದ ಕನಸನ್ನು ಭಗ್ನಗೊಳಿಸಿತು.

ತಲೈವಾಸ್‌ ತಂಡದ ಪರ ರೇಡರ್‌ಗಳಾದ ನರೇಂದರ್‌ ಖಂಡೋಲಾ (9 ಅಂಕ), ಸಚಿನ್‌ (8 ಅಂಕ) ಮತ್ತು ಡಿಫೆಂಡರ್‌ ನಿತೇಶ್‌ ಕುಮಾರ್‌ (5 ಅಂಕ) ಮಿಂಚಿದರು. ತನ್ನ ಮೊದಲ ಎರಡು ಪಂದ್ಯಗಳಲ್ಲಿ ಹರಿಯಾಣ ಸ್ಟೀಲರ್ಸ್‌ ಮತ್ತು ಪಟ್ನಾ ಪೈರೇಟ್ಸ್‌ ವಿರುದ್ಧ ಗೆದ್ದು ಭರ್ಜರಿಯಾಗಿ ಅಭಿಯಾನ ಆರಂಭಿಸಿದ್ದ ಪುಣೇರಿ ಪಲ್ಟನ್‌ ತಂಡದ ಪರ ಮೋಹಿತ್‌ ಗೋಯೆತ್ (13 ಅಂಕ) ಮತ್ತು ನಾಯಕ ಅಸ್ಲಾಮ್‌ ಇನಾಮದಾರ್ (4 ಅಂಕ) ಮಾತ್ರ ಗಮನ ಸೆಳೆದರು.

ADVERTISEMENT

ಲೀಗ್‌ನಲ್ಲೇ ಅತ್ಯಧಿಕ ಮೊತ್ತ (₹2.15 ಕೋಟಿ) ಪಡೆದಿರುವ ಸಚಿನ್‌ ಹಾಗೂ ನರೇಂದರ್‌ ಆರಂಭದಿಂದಲೇ ಎದುರಾಳಿಯ ಮೇಲೆ ಒತ್ತಡ ಹೇರಿದರು. ಉಭಯ ತಂಡಗಳು ಎರಡೂ ಅವಧಿಗಳಲ್ಲಿ ಬಹುತೇಕ ಸಮಬಲದ ಹೋರಾಟ ನೀಡಿದವು. ವಿರಾಮದ ವೇಳೆ ತಮಿಳ್ ತಲೈವಾಸ್ ತಂಡ 19–15ರಲ್ಲಿ ಮುಂದಿತ್ತು. ಆದರೆ ತಲೈವಾಸ್‌ ಎರಡು ಬಾರಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿದ್ದು ಮುನ್ನಡೆ ಸಾಧಿಸಲು ನೆರವಾಯಿತು.

ಗುರುವಾರದ ಪಂದ್ಯಗಳು:

ಬೆಂಗಾಲ್‌ ವಾರಿಯರ್ಸ್‌– ಯು.ಪಿ. ಯೋಧಾಸ್‌ (ರಾತ್ರಿ 8); ಹರಿಯಾಣ ಸ್ಟೀಲರ್ಸ್‌– ಜೈಪುರ
ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.