ADVERTISEMENT

ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಾಕ್ಷಿ, ಪೂನಿಯಾ

ಪಿಟಿಐ
Published 14 ಫೆಬ್ರುವರಿ 2024, 23:04 IST
Last Updated 14 ಫೆಬ್ರುವರಿ 2024, 23:04 IST
   

ನವದೆಹಲಿ: ವಿಶ್ವ ಕುಸ್ತಿ ಸಂಸ್ಥೆ ಯು (ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌) ಭಾರತ ಕುಸ್ತಿ ಫೆಡರೇಷನ್‌ನ ಮೇಲಿನ ಅಮಾನತು ವಾಪಸು ಪಡೆಯುವಲ್ಲಿ ಅಧ್ಯಕ್ಷ ಸಂಜಯ್ ಸಿಂಗ್ ಕುಟಿಲ ಮಾರ್ಗ ಅನುಸರಿಸಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಪೈಲ್ವಾನರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಬುಧವಾರ ಆರೋಪಿಸಿದ್ದಾರೆ.

ಕುಸ್ತಿ ಫೆಡರೇಷನ್ ವಿರುದ್ಧ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಮಂಗಳ ವಾರವಷ್ಟೇ ಯುಡಬ್ಲ್ಯುಡಬ್ಲ್ಯು, ಭಾರತ ಕುಸ್ತಿ ಫೆಡರೇಷನ್ ಮೇಲಿನ ಅಮಾನತನ್ನು ವಾಪಸು ಪಡೆದಿತ್ತು. ಜೊತೆಗೆ, ಬ್ರಿಜಭೂಷಣ್ ಶರಣ್ ಸಿಂಗ್ ವಿರುದ್ಧ ದೀರ್ಘ ಹೋರಾಟ ನಡೆಸಿದ್ದ ಪೂನಿಯಾ, ಸಾಕ್ಷಿ ಮತ್ತು ವಿನೇಶಾ ವಿರುದ್ಧ ಯಾವುದೇ ರೀತಿಯಲ್ಲಿ ತಾರತಮ್ಯ ತೋರಿಸುವುದಿಲ್ಲ ಎಂದು ಲಿಖಿತವಾಗಿ ಖಾತರಿ ನೀಡಬೇಕೆಂದೂ ಸೂಚಿಸಿತ್ತು. ಫೆಡರೇಷನ್‌ ಚುನಾವಣೆ ನಡೆಸಲು ವಿಳಂಬ ಮಾಡಿದ್ದಕ್ಕೆ ಅಮಾನತು ಹೇರಲಾಗಿತ್ತು.

‘ಅಮಾನತು ಹಿಂಪಡೆಯಲು ಸಂಜಯ್ ಸಿಂಗ್ ವಾಮಮಾರ್ಗ ಅನುಸರಿಸಿದ್ದಾರೆ’ ಎಂದು ಸಾಕ್ಷಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.