ADVERTISEMENT

ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ: ಭಾರತ ಮಹಿಳಾ ಹಾಕಿ ತಂಡಕ್ಕೆ ಸಲಿಮಾ ನಾಯಕಿ

ಪಿಟಿಐ
Published 28 ಅಕ್ಟೋಬರ್ 2024, 12:54 IST
Last Updated 28 ಅಕ್ಟೋಬರ್ 2024, 12:54 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ನವದೆಹಲಿ: ಬಿಹಾರದ ರಾಜಗೀರ್‌ನಲ್ಲಿ ನವೆಂಬರ್‌ 11 ರಿಂದ 20ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೊಫಿ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಸಲಿಮಾ ಟೆಟೆ ಅವರನ್ನು ನಾಯಕಿಯನ್ನಾಗಿ ಹೆಸರಿಸಲಾಗಿದೆ.

ADVERTISEMENT

ನವನೀತ್ ಕೌರ್‌ ಅವರು ತಂಡದ ಉಪನಾಯಕಿಯಾಗಿದ್ದಾರೆ. ರಾಂಚಿಯಲ್ಲಿ ಕಳೆದ ವರ್ಷ ನಡೆದ ಇದೇ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಕಾರಣ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚು ಇವೆ.

ತಂಡದಲ್ಲಿ ಭಾರತದ ಜೊತೆಗೆ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತ ಚೀನಾ, ಜಪಾನ್‌, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಭಾಗವಹಿಸಲಿವೆ. ಬಾರತ ನವೆಂಬರ್ 11ರಂದು ಮಲೇಷ್ಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಈ ಕ್ರೀಡಾಂಗಣವನ್ನು ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ.

‘ಹಾಲಿ ಚಾಂಪಿಯನ್‌ ಆಗಿ ಇನ್ನೊಂದು ಪ್ರಮುಖ ಟೂರ್ನಿಗೆ ತಂಡವನ್ನು ಮುನ್ನಡೆಸುವುದು ಅಪೂರ್ವ ಅನುಭವ’ ಎಂದು ತಂಡದ ಆಯ್ಕೆಯ ನಂತರ, ಮಿಡ್‌ಫೀಲ್ಡರ್‌ ಸಲಿಮಾ ಪ್ರತಿಕ್ರಿಯಿಸಿದರು.

18 ಆಟಗಾರ್ತಿಯರ ತಂಡ ಹೀಗಿದೆ:

ಗೋಲ್‌ಕೀಪರ್ಸ್‌: ಸವಿತಾ ಮತ್ತು ಬಿಚು ದೇವಿ ಕರಿಬಮ್

ಡಿಫೆಂಡರ್ಸ್‌: ಉದಿತಾ, ಜ್ಯೋತಿ, ವೈಷ್ಣವಿ ವಿಠ್ಠಲ ಫಾಲ್ಕೆ, ಸುಶೀಲಾ ಚಾನು ಪುಖ್ರಾಂಬಮ್, ಇಶಿಕಾ ಚೌಧರಿ.

ಮಿಡ್‌ಫೀಲ್ಡರ್ಸ್‌: ನೇಹಾ, ಸಲಿಮಾ ಟೆಟೆ, ಶರ್ಮಿಲಾ ದೇವಿ, ಮನಿಷಾ ಚೌಹಾನ್, ಸುನೆಲಿಟಾ ಟೊಪ್ಪೊ, ಲಾಲ್ರೆಂಸಿಯಾಮಿ, ಫಾರ್ವರ್ಡ್ಸ್: ನವನೀತ್ ಕೌರ್, ಪ್ರೀತಿ ದುಬೆ, ಸಂಗಿತಾ ಕುಮಾರಿ, ದೀಪಿಕಾ, ಬ್ಯೂಟಿ ಡಂಗ್ಡಂಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.