ADVERTISEMENT

ಸಂಕಲ್ಪ್ ಗುಪ್ತಾ ಭಾರತದ ಗ್ರ್ಯಾಂಡ್‌ಮಾಸ್ಟರ್‌

ಪಿಟಿಐ
Published 8 ನವೆಂಬರ್ 2021, 11:21 IST
Last Updated 8 ನವೆಂಬರ್ 2021, 11:21 IST
ಸಂಕಲ್ಪ್ ಗುಪ್ತಾ –ಟ್ವಿಟರ್ ಚಿತ್ರ
ಸಂಕಲ್ಪ್ ಗುಪ್ತಾ –ಟ್ವಿಟರ್ ಚಿತ್ರ   

ಚೆನ್ನೈ: ಮಹಾರಾಷ್ಟ್ರದ ನಾಗ್ಪುರದ ಸಂಕಲ್ಪ್‌ ಗುಪ್ತಾ ಅವರು ಭಾರತದ 71ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. ಸರ್ಬಿಯಾದ ಅರಂಜೆಲೊವಾಕ್‌ನಲ್ಲಿ ನಡೆದ ಜಿಎಂ ಆಸ್ಕ್‌ 3 ರೌಂಡ್ ರಾಬಿನ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ಅವರು ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ ಸಂಪಾದಿಸಿಕೊಂಡರು. ಟೂರ್ನಿಯಲ್ಲಿ 6.5 ಪಾಯಿಂಟ್ ಕಲೆ ಹಾಕಿದ್ದರು.

18 ವರ್ಷದ ಸಂಕಲ್ಪ್ 24 ದಿನಗಳಲ್ಲಿ ಮೂರು ಟೂರ್ನಿಗಳಲ್ಲಿ ಸತತ ಆಡುವ ಮೂಲಕ ಜಿಎಂ ನಾರ್ಮ್ ಗಳಿಸಿಕೊಂಡರು. ಈ ಮೂರು ಟೂರ್ನಿಗಳಲ್ಲಿ ಅವರ ರೇಟಿಂಗ್ ಸಾಧನೆ 2599ಕ್ಕೂ ಹೆಚ್ಚಾಗಿತ್ತು.

ಸರ್ಬಿಯಾ ಟೂರ್ನಿಯಲ್ಲಿ ಅವರು 2500 ಎಲೊ ರೇಟಿಂಗ್ ಕೂಡ ಸಂಪಾದಿಸಿಕೊಂಡರು. ಇದು, ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೇರುವ ಅವರ ಹಾದಿಯನ್ನು ಸುಗಮಗೊಳಿಸಿತು.

ADVERTISEMENT

ಐದು ಪಂದ್ಯಗಳಲ್ಲಿ ಜಯ ಗಳಿಸಿರುವ ಅವರು ಮೂರರಲ್ಲಿ ಡ್ರಾ ಸಾಧಿಸಿದ್ದಾರೆ. ರಷ್ಯಾದ ರೂಡಿಕ್ ಮಕ್ರೇರಿಯನ್‌ ಎದುರಿನ ಪಂದ್ಯದಲ್ಲಿ ಮಾತ್ರ ಸೋತಿದ್ದರು. ಒಟ್ಟು 6.5 ಪಾಯಿಂಟ್‌ ಗಳಿಸಿದ್ದರು. ರೂಡಿಕ್ ಕೂಡ 6.5 ಪಾಯಿಂಟ್ ಸಂಪಾದಿಸಿದ್ದರು. ಆದರೆ ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಅಗ್ರ ಸ್ಥಾನಕ್ಕೇರಿದರು. ಐಎಂ ಎಸ್‌.ನಿತಿನ್‌ 5.5 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರು.

ವಿಶ್ವನಾಥನ್‌ ಅಭಿನಂದನೆ
ಗ್ರ್ಯಾಂಡ್‌ಮಾಸ್ಟರ್ ಪಟ್ಟಕ್ಕೇರಿರುವ ಸಂಕಲ್ಪ್‌ ಗುಪ್ತಾ ಅವರನ್ನು ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.